ಇದ್ದಕ್ಕಿದಂತೆ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

Nitin Gadkari falls sick, sits down on stage during national anthem

ಇದ್ದಕ್ಕಿದಂತೆ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ – Nitin Gadkari falls sick, sits down on stage during national anthem

ಇದ್ದಕ್ಕಿದಂತೆ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಮುಂಬೈ: ಸಭೆಯೊಂದಕ್ಕೆ ಹಾಜರಾಗಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಲ್ಲಿನ ಪುಣ್ಯಶ್ಲೋಕ್ ಅಹಲ್ಯದೇವಿ ಹೊಲ್ಕರ್ ಸೋಲಾಪುರ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುತ್ತಿರುವಾಗ ತಲೆತಿರುಗುವಿಕೆಯಿಂದ ಕುಸಿದು ಬಿದ್ದಿದ್ದಾರೆ.
ಸಮಾರಂಭದ ವಿಡಿಯೋ ತುಣುಕಿನ ಪ್ರಕಾರ, ಸಮಾರಂಭದಲ್ಲಿ ಗಡ್ಕರಿ ಗೌರವ ಅತಿಥಿಯಾಗಿದ್ದರು. ಗಡ್ಕರಿ ರಾಷ್ಟ್ರಗೀತೆಗಾಗಿ ನಿಂತಿದ್ದಾಗಲೂ, ಅವರು ಸ್ವಲ್ಪ ಎಡಕ್ಕೆ ವಾಲುತ್ತಿದ್ದರು ಮತ್ತು ಅವರ ಹಿಂದೆ ನಿಂತಿದ್ದ ಅವರ ಭದ್ರತಾ ಸಿಬ್ಬಂದಿಯ ಬೆಂಬಲದೊಂದಿಗೆ ಕುಳಿತರು.
ತಕ್ಷಣ ಸ್ಥಳಕ್ಕೆ ಬಂದ ವೈದ್ಯರು ಅವರಿಗೆ ಪ್ರಾಥಮಿಕ ಪರೀಕ್ಷೆಯನ್ನು ನಡೆಸಿ, ಚಿಕಿತ್ಸೆ ನೀಡಿದ್ದಾರೆ ಮತ್ತು ಈ ಬಗ್ಗೆ ವೈದ್ಯರು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದು, ಅವರ ಆರೋಗ್ಯ ಯತಾಸ್ಥಿತಿಗೆ ತಲುಪಿದೆ.
ಅವರು ಸೋಲಾಪುರ ನಗರದಲ್ಲಿ ಎರಡು ಕಾರ್ಯಕ್ರಮಗಳಿಗೆ ಹಾಜರಾಗಬೇಕಿತ್ತು, ಅವರ ಆರೋಗ್ಯ ಈ ರೀತಿ ಏರುಪೇರಾದ ಕಾರಣಕ್ಕೆ ಅವರು ವೈದ್ಯರ ಸಲಹೆಯಂತೆ ಅವುಗಳನ್ನು ರದ್ದುಗೊಳಿಸಿ ನಾಗ್ಪುರವನ್ನು ತಲುಪಿದ್ದಾರೆ. ಅವರು ಗಂಟಲಿನ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಯಾಂಟಿಬಯಾಟಿಕ್ಸ್ ತೆಗೆದುಕೊಳ್ಳುತ್ತಾರೆ.
ತೆಗೆದುಕೊಂಡ ಯಾಂಟಿಬಯಾಟಿಕ್ಸ್ ಓವರ್ ಡೋಸ್ ನಿಂದ ತಲೆ ಸುತ್ತು ಮತ್ತು ಆಯಾಸಗೊಂಡು ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ, ಸದ್ಯ ಅವರಿಗೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ,  ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಇದೆ ರೀತಿ ಕುಸಿದು ಬಿದ್ದಿದ್ದರು.

ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ, ಕಳೆದ ಹಲವಾರು ತಿಂಗಳುಗಳಲ್ಲಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದೆ ರೀತಿ ಆಯಾಸಗೊಂಡು ಕುಸಿದು ಹೋದ ಕೆಲವು ಘಟನೆಗಳು ನಡೆದಿವೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಹ್ಮದ್‌ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದೆ ರೀತಿಯ ಘಟನೆ ನಡೆದಿತ್ತು.//// 

Web Title : Nitin Gadkari falls sick, sits down on stage during national anthem