Welcome To Kannada News Today

7,8,9 ನೇ ತರಗತಿಗಳಿಗೆ ಪರೀಕ್ಷೆ ಇಲ್ಲ, 10 ನೇ ತರಗತಿ ಪರೀಕ್ಷೆ ಏಪ್ರಿಲ್ 14 ರ ನಂತರ ಪ್ರಕಟ

No examination for 7,8,9th class, 10th class examination will be Announce after 14th April

🌐 Kannada News :

ಬೆಂಗಳೂರು: ಕೊರೋನಾ ಕಾರಣಕ್ಕೆ ಮುಂದೂಡಿಕೆಯಾಗಿದ್ದ 7-9ರ ವರೆಗಿನ ತರಗತಿಗಳ ಪರೀಕ್ಷೆಗಳನ್ನು ಈ ವರ್ಷ ರದ್ದು ಮಾಡಲಾಗಿದೆ. ಒಂದರಿಂದ ಆರನೇ ತರಗತಿ ಮಕ್ಕಳಂತೆಯೇ ಈ ವಿದ್ಯಾರ್ಥೀಗಳು ಸಹ ಪ್ರಸ್ತುತ ವರ್ಷ ಪರೀಕ್ಷೆ ಬರೆಯದೆಯೇ ಮುಂದಿನ ತರಗತಿಗೆ ತೇರ್ಗಡೆ ಹೊಂದಲಿದ್ದಾರೆ.

ಕೊರೋನಾ ಲಾಕ್‌ಡೌನ್‌ ಪರಿಣಾಮ ಸಮಾಯಾಭಾವ ತಲೆದೋರಿರಿವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದು ಪಡಿಸದೇ ಸರಕಾರದ ಬಳಿ ಬೇರೆ ಮಾರ್ಗವಿಲ್ಲ. ಕೆಲವು ವಲಯಗಳಲ್ಲಿ ಸಿಬಿಎಸ್‌ಇ ಶಾಲೆಗಳು ಈಗಾಗಲೇ ಈ ಪರೀಕ್ಷೆಗಳನ್ನು ರದ್ದು ಮಾಡಿ ವಾರ್ಷಿಕ ಸರಾಸರಿ ಆಧಾರದ ಮೇಲೆ ಮಕ್ಕಳಿಗೆ ಮುಂಬಡ್ತಿ ನೀಡಲು ನಿರ್ಧಾರ ಕೈಗೊಂಡಿವೆ.

ರಾಜ್ಯದಲ್ಲಿ 7-9ನೇ ತರಗತಿಗಳ ಪರೀಕ್ಷೆ ರದ್ದು.‌ ಎಲ್ಲ ವಿದ್ಯಾರ್ಥಿಗಳು ಪಾಸ್ ಮಾಡಲು ಶಿಕ್ಷಣ ಇಲಾಖೆ ಬುಧವಾರ ನಿರ್ಧಾರ ತೆಗೆದುಕೊಂಡಿತು. ಈ ಮಧ್ಯೆ sslc ಪರೀಕ್ಷೆಗಳು ನಡೆದೇ ತೀರುತ್ತದೆ ಎಂದು ಇಲಾಖೆ ಹೇಳಿದೆ. ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡುವ ಪ್ರಸ್ತಾವ ಸದ್ಯಕ್ಕಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಹತ್ತನೇ ತರಗತಿಯ ಪರೀಕ್ಷಗಳು ಇದೇ 14ರ ನಂತರ ನಡೆಯಲಿದ್ದು ಅದಕ್ಕೆ ಸಂಬಂಧೀಸಿದ ವೇಳೇಪಟ್ಟಿಯನ್ನು ಶೀಘ್ರವೇ ಅಂತಿಮ ಮಾಡುವುದಾಗಿ ಇಲಾಖೆ ಅದಿಕಾರಿಗಳು ಹೇಳಿದ್ದಾರೆ. ಇನ್ನು ಬಾಕಿ ಉಳಿದಿರುವ puc ಒಂದು ವಿಷಯದ (ಇಂಗ್ಲಿಷ್) ಪರೀಕ್ಷೆ ನಡೆಸುವ ಕುರಿತಾಗಿ ಸಹ 14ರ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ

Web Title : No examination for 7,8,9th class, 10th class examination will be Announce after 14th April

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile