ಹಬ್ಬ ಹರಿದಿನಗಳಲ್ಲಿ ಗಲಭೆ.. ಸಿಎಂ ಯೋಗಿ ಹೊಸ ಆದೇಶ

ಇತ್ತೀಚೆಗೆ ನಡೆದ ಶ್ರೀರಾಮನವಮಿ ಹಾಗೂ ಶೋಭಾಯಾತ್ರೆ ವೇಳೆ ಹಲವು ರಾಜ್ಯಗಳಲ್ಲಿ ಗಲಭೆ ನಡೆದಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಹಿನ್ನೆಲೆಯಲ್ಲಿ ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ನಿರ್ದೇಶನ ನೀಡಿದ್ದಾರೆ. 

ಲಖನೌ: ಇತ್ತೀಚೆಗೆ ನಡೆದ ಶ್ರೀರಾಮನವಮಿ ಹಾಗೂ ಶೋಭಾಯಾತ್ರೆ ವೇಳೆ ಹಲವು ರಾಜ್ಯಗಳಲ್ಲಿ ಗಲಭೆ ನಡೆದಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಹಿನ್ನೆಲೆಯಲ್ಲಿ ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ನಿರ್ದೇಶನ ನೀಡಿದ್ದಾರೆ.

ಶಾಂತಿ ಪಾಲನೆ ಕುರಿತು ಉನ್ನತ ಮಟ್ಟದ ಸಮ್ಮೇಳನ ನಡೆಸಿದ ನಂತರ ಅವರು ಕೆಲವು ಮಾರ್ಗಸೂಚಿಗಳನ್ನು ವಿವರಿಸಿದರು. ಈದ್ ಮತ್ತು ಅಕ್ಷಯ ತೃತೀಯ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಆದೇಶಗಳನ್ನು ಹೊರಡಿಸಲಾಗಿದೆ.

ಇನ್ನು ಮುಂದೆ ಅನುಮತಿ ಇಲ್ಲದೆ ಯಾವುದೇ ರ್ಯಾಲಿ ಮತ್ತು ಯಾತ್ರೆ ನಡೆಸಬಾರದು ಎಂದು ಸಿಎಂ ಯೋಗಿ ನಿರ್ದೇಶನ ನೀಡಿದ್ದಾರೆ. ಶಾಂತಿ ಕಾಪಾಡಲು ರ್ಯಾಲಿ ನಡೆಸಲು ಅನುಮತಿಗಾಗಿ ಸಂಘಟಕರು ಅಫಿಡವಿಟ್ ಸಲ್ಲಿಸಬೇಕು ಎಂದು ಯೋಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸಾಂಪ್ರದಾಯಿಕ ಹಬ್ಬಗಳಿಗೆ ಮಾತ್ರ ಅವಕಾಶವಿದ್ದು, ಹೊಸ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಯೋಗಿ ಹೇಳಿದ್ದಾರೆ. ರಾಜ್ಯದ ಜನರ ಸುರಕ್ಷತೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

No Religious Procession Or Marches Will Be Allowed Without Proper Permission Tweets Up Cm Yogi

Follow Us on : Google News | Facebook | Twitter | YouTube