ಕರ್ನಾಟಕ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ : ಹೆಚ್.ಡಿ.ದೇವೇಗೌಡ
Notify Karnataka Floods as National Calamity - H.D.Deve Gowda
ಕರ್ನಾಟಕ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ : ಹೆಚ್.ಡಿ.ದೇವೇಗೌಡ – Notify Karnataka Floods as National Calamity – H.D.Deve Gowda
ಕರ್ನಾಟಕ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ : ಹೆಚ್.ಡಿ.ದೇವೇಗೌಡ
ಕನ್ನಡ ನ್ಯೂಸ್ ಟುಡೇ : ಪ್ರವಾಹದಿಂದ ಹಾನಿಗೊಳಗಾದ ರಾಜ್ಯದ ಪರಿಸ್ಥಿತಿಯನ್ನು ಉಲ್ಲೇಖಿಸಿ ಮಾಜಿ ಪ್ರಧಾನಿ ಮತ್ತು ಜನತಾದಳ (ಜಾತ್ಯತೀತ) ಮುಖಂಡ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕಕ್ಕೆ 5000 ಕೋಟಿ ರೂ. ಬಿಡುಗಡೆ ಮಾಡುವಂತೆ ಪತ್ರ ರವಾನಿಸಿದ್ದಾರೆ.
ದೇವೇಗೌಡ ಅವರು ಮಧ್ಯಂತರ ಪರಿಹಾರವಾಗಿ 5000 ಕೋಟಿ ರೂ. ಕೇಳಿದ್ದಲ್ಲದೆ, ನೈಸರ್ಗಿಕ ವಿಕೋಪವನ್ನು, ನೈಸರ್ಗಿಕ ವಿಪತ್ತು ಎಂದು ಪರಿಗಣಿಸುವಂತೆ ಪ್ರಧಾನಿ ಮೋದಿ ಅವರನ್ನು ಕೋರಿದ್ದಾರೆ.
ಇನ್ನು ಪ್ರವಾಹದಿಂದಾಗಿ , ಆಗಸ್ಟ್ 1 ರಿಂದ ಕನಿಷ್ಠ 40 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 14 ಜನರು ಕಾಣೆಯಾಗಿದ್ದಾರೆ. 5,81,702 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 1,168 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಹದಿನೇಳು ಜಿಲ್ಲೆಗಳು ಮತ್ತು ರಾಜ್ಯದ 2,028 ಗ್ರಾಮಗಳು ಪರಿಣಾಮ ಬೀರಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಮುಂದಿನ ಐದು ದಿನಗಳವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಈ ನಡುವೆ ಶಿವಮೊಗ್ಗ ಜಿಲ್ಲೆಯ ರಾಜೀವ್ ಗಾಂಧಿ ನಗರದಲ್ಲಿ ಹಲವಾರು ಮನೆಗಳು ಪ್ರವಾಹದಲ್ಲಿ ಹಾನಿಗೊಳಗಾಗಿವೆ, ಇದುವರೆಗೂ ಯಾವುದೇ ನಾಯಕರು ತಮ್ಮನ್ನು ಭೇಟಿ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.////
Web Title : Notify Karnataka Floods as National Calamity – H.D.Deve Gowda