Welcome To Kannada News Today

75 ವರ್ಷಗಳಿಂದ ಶುಲ್ಕ ತೆಗೆದುಕೊಳ್ಳದೆ ಕಲಿಸುತ್ತಿರುವ ಅಜ್ಜ

ಮರದ ಕೆಳಗೆ ಮಕ್ಕಳಿಗೆ ಒಡಿಶಾದ ಅಜ್ಜ 75 ವರ್ಷಗಳಿಗೂ ಹೆಚ್ಚು ಕಾಲ ಪಾಠ ಮಾಡುತ್ತಾ ಬಂದಿದ್ದಾರೆ.

🌐 Kannada News :

ಕನ್ನಡ ನ್ಯೂಸ್ ಟುಡೇ (Kannada News Today) :

ಒಡಿಶಾದ ವೃದ್ಧರೊಬ್ಬರು 75 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಒಂದೇ ಒಂದು ಪೈಸೆಯನ್ನೂ ಪಡೆಯದೇ ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡುವ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಶಿಕ್ಷಕ ನಂದಾ ಪ್ರೆಸ್ಟಿ ಮಕ್ಕಳಿಗೆ ಮಾತ್ರವಲ್ಲದೇ, ಗ್ರಾಮದ ಹಿರಿಯರಿಗೂ ಕಲಿಸುತ್ತಾರೆ.

ಈ ಅಜ್ಜ ಬರ್ತಂಡಾ ಗ್ರಾಮದವರು ಮತ್ತು ಗ್ರಾಮದ ಸರ್ಪಂಚ್ ಅವರ ಈ ಕಾರ್ಯಕ್ಕೆ ಮೂಲಸೌಕರ್ಯವನ್ನು ಒದಗಿಸಲು ಸರ್ಕಾರದ ನೆರವು ಪಡೆಯುವಂತೆ ವಿನಂತಿಸಿಕೊಂಡರು, ವಿನಂತಿಯನ್ನು ನಿರಂತರವಾಗಿ ನಿರಾಕರಿಸಿದ ವೃದ್ಧ ಮರದ ಕೆಳಗೆ ಪಾಠ ಮಾಡುತ್ತಾ ಬಂದಿದ್ದಾರೆ. ಮರದ ಕೆಳಗೆ ಕುಳಿತು ತನ್ನ ಕೆಲಸವನ್ನು ಮುಂದುವರಿಸಲು ಆದ್ಯತೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೃದ್ಧ “ನಾನು ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ನಮ್ಮ ಹಳ್ಳಿಯಲ್ಲಿ ಅನಕ್ಷರಸ್ಥರಾಗಿರುವ ಅನೇಕ ಜನರಿದ್ದಾರೆ . ಅವರು ತಮ್ಮ ಹೆಸರುಗಳನ್ನು ಸಹಿ ಹಾಕಲು ಸಹ ಸಾಧ್ಯವಾಗುತ್ತಿರಲಿಲ್ಲ ಮತ್ತು ಹೆಬ್ಬೆಟ್ಟಿಗೆ ಸೀಮಿತರಾಗಿದ್ದರು. ಸಹಿ ಮಾಡುವುದಾದರೂ ಹೇಗೆಂದು ಕಲಿಸಲು ನಾನು ಮುಂದಾದೆ, ಅನೇಕರು ಆಸಕ್ತಿ ತೋರಿಸಿದರು ಮತ್ತು ಸದ್ಯ ಅವರಲ್ಲಿ ಕೆಲವರು ಭಗವದ್ಗೀತೆಯನ್ನು ಸಹ ಓದಲು ಪ್ರಾರಂಭಿಸಿದ್ದಾರೆ. ನನ್ನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ಸಹ ನಾನು ಈಗ ಕಲಿಸುತ್ತೇನೆ, ”ಎಂದು ಪ್ರೆಸ್ಟಿ ಹೇಳಿದರು.

📣 ಇನ್ನಷ್ಟು ಕನ್ನಡ ಇಂಡಿಯಾ ನ್ಯೂಸ್ ಗಳಿಗಾಗಿ India News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today