ಓಮಿಕ್ರಾನ್ ವೈರಸ್ 5 ಪಟ್ಟು ವೇಗವಾಗಿ ಹರಡುತ್ತದೆ !

Omicron spreads 5 times faster : ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಓಮಿಕ್ರಾನ್ ವೈರಸ್ ಇತರ ವೈರಸ್‌ಗಳಿಗಿಂತ 5 ಪಟ್ಟು ವೇಗವಾಗಿ ಹರಡುತ್ತದೆ.

ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಓಮಿಕ್ರಾನ್ ವೈರಸ್ ಇತರ ವೈರಸ್‌ಗಳಿಗಿಂತ 5 ಪಟ್ಟು ವೇಗವಾಗಿ ಹರಡುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಭಾರತದಲ್ಲಿ ಇಬ್ಬರಿಗೆ ಓಮಿಕ್ರಾನ್ ಕರೋನವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ನಿಟ್ಟಿನಲ್ಲಿ, ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಅಗರ್ವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ…. ದಕ್ಷಿಣ ಆಫ್ರಿಕಾದಿಂದ ಕರ್ನಾಟಕದ ಬೆಂಗಳೂರಿಗೆ ಬಂದಿದ್ದ ಇಬ್ಬರಿಗೆ ಓಮಿಕ್ರಾನ್ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಿಬ್ಬರೂ ವಿದೇಶಿಗರು. ಅವರ ಸಂಪರ್ಕಕ್ಕೆ ಬಂದವರೆಲ್ಲ ಪತ್ತೆಯಾಗಿದ್ದು, ಅವರ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಕೊರೊನಾ ತಡೆಗಟ್ಟುವ ಕ್ರಮ ಅನುಸರಿಸಲಾಗುವುದು ಎಂದಿದ್ದಾರೆ.

ಓಮಿಕ್ರಾನ್ ಸೋಂಕಿಗೆ ಒಳಗಾಗಿರುವವರು ಕೇವಲ ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ; ತೀವ್ರವಾದ ರೋಗಲಕ್ಷಣಗಳಿಲ್ಲ. ಓಮಿಕ್ರಾನ್ ಬೆದರಿಕೆ ಇರುವ ದೇಶಗಳ ಪ್ರಯಾಣಿಕರಿಗೆ RTPCR ಪರೀಕ್ಷೆ ಕಡ್ಡಾಯವಾಗಿದೆ; ಸೋಂಕು ದೃಢಪಟ್ಟರೆ ಹೆಚ್ಚಿನ ಚಿಕಿತ್ಸೆ, ಇಲ್ಲದಿದ್ದರೆ 7 ದಿನಗಳವರೆಗೆ ಪ್ರತ್ಯೇಕಿಸಲಾಗುತ್ತದೆ ಎಂದಿದ್ದಾರೆ.

ಪ್ರಪಂಚದಾದ್ಯಂತ 29 ದೇಶಗಳಲ್ಲಿ ಇಲ್ಲಿಯವರೆಗೆ 373 ಜನರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ; ಓಮಿಕ್ರಾನ್ ವೈರಸ್ ಡೆಲ್ಟಾ ಟೈಪ್ ಕರೋನಾ ವೈರಸ್‌ಗಿಂತ 5 ಪಟ್ಟು ವೇಗವಾಗಿ ಹರಡುತ್ತದೆ. ಓಮಿಕ್ರಾನ್ ಕರೋನಾ ಭಗ್ಗೆ ಭಯಪಡಬೇಡಿ, ಆದರೆ ಜಾಗರೂಕರಾಗಿರುವುದು ಮುಖ್ಯ ಎಂಬ ಸಲಹೆ ನೀಡಲಾಗಿದೆ.

Stay updated with us for all News in Kannada at Facebook | Twitter
Scroll Down To More News Today