Welcome To Kannada News Today

ಪ್ರಧಾನಿ ಮೋದಿಯ ದೀಪದ ಸಂದೇಶಕ್ಕೆ ಟೀಕೆಗಳ ಸುರಿಮಳೆ, ಹೇಳಿಕೆ-ಟಾಸ್ಕ್ ಗಳನ್ನು ನೀಡುವಲ್ಲಿ ನಿರತರಾದ್ರ ಪ್ರಧಾನಿ

🌐 Kannada News :

ಇತಿಹಾಸಕಾರ ರಾಮಚಂದ್ರ ಗುಹಾ ಪ್ರಧಾನ ಮಂತ್ರಿಯ ದೀಪದ ಸಂದೇಶವನ್ನು ‘ದುರಂತದ ಸಮಯದಲ್ಲಿ ಒಂದು ಪ್ರಹಸನ’ ಎಂದು ವಿಮರ್ಶಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು “ಕೊರೋನಾ ವೈರಸ್ ವಿರುದ್ಧ ದೇಶದ ಸಾಮೂಹಿಕ ಮನೋಭಾವವನ್ನು ಪ್ರದರ್ಶಿಸಲು ಭಾನುವಾರ ರಾತ್ರಿ ೯ ಗಂಟೆಗೆ ೯ ನಿಮಿಷಗಳ ಕಾಲ ಬಾಲ್ಕನಿಗಳಲ್ಲಿ ದೀಪ ಹಚ್ಚುವಂತೆ” ದೇಶದ ಜನತೆಯಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಕೊರೋನಾ ವೈರಸ್ ಸ್ಫೋಟದ ನಂತರ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ತನ್ನ ಮೂರನೇ ಭಾಷಣ ಇದಾಗಿದ್ದು, ಏಪ್ರಿಲ್ ೫ರ ಭಾನುವಾರದಂದು ರಾತ್ರಿ ೯ ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಗಳ ದೀಪಗಳನ್ನು ಸ್ವಿಚ್ ಆಫ್ ಮಾಡಿ, ದೀಪಗಳು, ಮೇಣದ ಬತ್ತಿಗಳು, ಮೊಬೈಲ್ ಬ್ಯಾಟರಿ ದೀಪಗಳನ್ನು ಬೆಳಗಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರಧಾನ ಮಂತ್ರಿಯ ಈ ಕರೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಹಾಗೂ ತೀವ್ರ ಟೀಕೆಗಳ ಸುರಿಮಳೆ ಆಗುತ್ತಿದೆ.
ಕೊರೋನಾ ವೈರಸ್ ವಿರುದ್ಧ ಹೋರಾಡಲು ಟೆಸ್ಟಿಂಗ್ ಕಿಟ್‌ಗಳು, ವೈದ್ಯಕೀಯ ಸಲಕರಣೆಗಳು, ಸುಸಜ್ಜಿತ ಆಸ್ಪತ್ರೆಗಳ ಮೇಲೆ ಗಮನ ನೀಡುವುದನ್ನು ಬಿಟ್ಟು ಕೇವಲ ಹೇಳಿಕೆ-ಟಾಸ್ಕ್ ಗಳನ್ನು ನೀಡುವಲ್ಲಿ ನಿರತರಾಗಿದ್ದಾರೆ ಎಂಬ ದೊಡ್ಡ ಆರೋಪCorona ಕಳೆದ ತಿಂಗಳಿನಿಂದಲೂ ಕೇಳಿ ಬರುತ್ತಿದೆ.

ದೇಶದಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆಯಿದೆ ಎಂದು ಹಲವಾರು ವೈದ್ಯಕೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಇದನ್ನು ನೀಗಿಸಲು ಸರ್ಕಾರ ಏನು ಮಾಡುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇಂತಹ ಸಂದರ್ಭದಲ್ಲೂ ವಿದೇಶಗಳಿಗೆ ವೈದ್ಯಕೀಯ ಸಲಕರಣೆ ರಫ್ತು ಮಾಡಿರುವ ನಿದರ್ಶನಗಳು ವರದಿಯಾಗುತ್ತಿವೆ.

ಜನರ ನೋವು, ಹೊರೆ ಮತ್ತು ಆರ್ಥಿಕ ಆತಂಕಗಳನ್ನು ಕಡಿಮೆ ಮಾಡಲು ಪ್ರಧಾನಿ ಕ್ರಮಗಳನ್ನು ಘೋಷಿಸಬಹುದಿತ್ತು.
ಸಂಕಷ್ಟದಲ್ಲಿರುವ ಆರ್ಥಿಕತೆ ಸರಿ ದಾರಿಗೆ ತರಲು ಯಾವ ಗಂಭೀರ ಯತ್ನವನ್ನೂ ಮಾಡದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ದೀಪ ಹಚ್ಚುವ ಮಹತ್ವದ ಬಗ್ಗೆ ಬರೆಯುತ್ತ ಕೂತಿದ್ದಾರೆ.

ಈ ಸಂದರ್ಭದಲ್ಲಿ ಜನರ ಸಮಸ್ಯೆಗಳತ್ತ ಗಮನ ಹರಿಸಬೇಕಿದ್ದ ಬಿಜೆಪಿಯ ಜನಪ್ರತಿನಿಧಿಗಳು ಮೂರು ದಿನ ದೀಪದ ಜಪ ಮಾಡುತ್ತ ಕೂಡಲಿದ್ದಾರೆ.

ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಕ್ಯಾಂಡಲ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಗತ್ಯ ವಸುಗಳಿಲ್ಲದೇ ಹೈರಾಣಾಗಿರುವ ಬಡವರನ್ನು ಅಣಕಿಸುವ ವಿಧಾನ ಇದಾಗಿದೆ.

ಸಂಘ ಪರಿವಾರದ ಸಾಮಾಜಿಕ ಮಾಧ್ಯಮಗಳು ತಪ್ಪು ಮಾಹಿತಿ ಅಭಿಯಾನದಲ್ಲಿ ತೊಡಗಿವೆ. ೯ ನಿಮಿಷಗಳ ಬೆಳಕು ವೈರಸ್ ಅನ್ನು ಹೇಗೆ ಕೊಲ್ಲುತ್ತದೆ ಎಂದೆಲ್ಲ ಅತಾರ್ಕಿಕ ಸಂದೇಶಗಳನ್ನು ಹರಡಲಾಗುತ್ತಿದೆ. ಇದೇ ಸತ್ಯವಾದರೆ ಇದನ್ನು ಮೊದಲೇ ಮಾಡಬೇಕಿತ್ತಲ್ಲ ಎಂಬ ಸರಳ ಪ್ರಶ್ನೆ ಕೇಳುವ ಬದಲು ಬಹಳಷ್ಟು ಜನರು ಇಂತಹ ಸಂದೇಶ ಫಾರ್ವರ್ಡ್ ಮಾಡುತ್ತಿರುವುದು ಆತಂಕದ ವಿಷಯ, ಎಂಬ ಸಾಮಾಜಿಕ ಟೀಕೆಗಳ ಸುರಿಮಳೆ ನಡೆಯುತ್ತಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.