Petrol Price Today: ಒಂದು ಲೀಟರ್ ಪೆಟ್ರೋಲ್ 120 ರೂ. ಗಡಿಯಲ್ಲಿ, ದೇಶಾದ್ಯಂತ ಇತ್ತೀಚಿನ ಬೆಲೆ ವಿವರಗಳು

Petrol diesel Prices - ಪೆಟ್ರೋಲ್ ಡೀಸೆಲ್ ಬೆಲೆಗಳು: ಜನರು ತಮ್ಮ ಬೈಕ್ ಮತ್ತು ಕಾರುಗಳನ್ನು ಹೊರತೆಗೆಯಲು ಮೊದಲು ಯೋಚನೆ ಮಾಡುತ್ತಿದ್ದಾರೆ. ಇಂಧನ ಬೆಲೆಗಳು ಗಗನಕ್ಕೇರುತ್ತಿದೆ. ಪೆಟ್ರೋಲ್ ದರ 100 ತಲುಪಿದಾಗ ನಾವು ಬಹಳಷ್ಟು ಯೋಚಿಸಿದ್ದೇವೆ.. ಆದರೆ ಈಗ ಅದು ರೂ 110 ದಾಟಿದೆ ಮತ್ತು ರೂ 120 ರ ಸನಿಹಕ್ಕೆ ಓಡುತ್ತಿದೆ. ತಾಜಾ ಇಂಧನ ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿದೆ. ಎಷ್ಟು? ಯಾವ ನಗರದಲ್ಲಿ ಎಷ್ಟು ಎಂಬುದು ಇಲ್ಲಿದೆ.

Petrol diesel Prices Today – ಪೆಟ್ರೋಲ್ ಡೀಸೆಲ್ ಬೆಲೆಗಳು: ಜನರು ತಮ್ಮ ಬೈಕ್ ಮತ್ತು ಕಾರುಗಳನ್ನು ಹೊರತೆಗೆಯಲು ಮೊದಲು ಯೋಚನೆ ಮಾಡುತ್ತಿದ್ದಾರೆ. ಇಂಧನ ಬೆಲೆಗಳು ಗಗನಕ್ಕೇರುತ್ತಿದೆ. ಪೆಟ್ರೋಲ್ ದರ 100 ತಲುಪಿದಾಗ ನಾವು ಬಹಳಷ್ಟು ಯೋಚಿಸಿದ್ದೇವೆ.. ಆದರೆ ಈಗ ಅದು ರೂ 110 ದಾಟಿದೆ ಮತ್ತು ರೂ 120 ರ ಸನಿಹಕ್ಕೆ ಓಡುತ್ತಿದೆ. ತಾಜಾ ಇಂಧನ ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿದೆ. ಎಷ್ಟು? ಯಾವ ನಗರದಲ್ಲಿ ಎಷ್ಟು ಎಂಬುದು ಇಲ್ಲಿದೆ.

ಇಂಧನ ಬೆಲೆಗಳು ಗಗನಕ್ಕೇರುತ್ತಲೇ ಇವೆ. ಜನ ಆ ಬಗ್ಗೆ ಕಿಡಿಕಾರಿದರೂ, ಎಷ್ಟೇ ಬೊಬ್ಬೆ ಹೊಡೆದ್ರು ಸಾಕಾಗುತ್ತಿಲ್ಲ, ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗುತ್ತಿಲ್ಲ. ದರಗಳು ಮತ್ತೆ ಏರಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 106.89 ರೂ. ಡೀಸೆಲ್ ದರ ಲೀಟರ್ ಗೆ 95.62 ರೂ. ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 113.12 ರೂ.ಗೆ ಏರಿಕೆಯಾಗಿದೆ. ಡೀಸೆಲ್ 104 ಗೆ ಲಭ್ಯವಿದೆ .

ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 104.22 ಮತ್ತು ಡೀಸೆಲ್ 100.25 ರೂ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 110.61 ರೂ ಮತ್ತು ಡೀಸೆಲ್ ಬೆಲೆ 101.49 ರೂ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.78 ರೂ ಮತ್ತು ಡೀಸೆಲ್ ಬೆಲೆ 99.08 ರೂ

ರಾಜಸ್ಥಾನದ ಗಂಗಾನಗರದಲ್ಲಿ ನಮ್ಮ ದೇಶದಲ್ಲೇ ಅತಿ ಹೆಚ್ಚು ಪೆಟ್ರೋಲ್ ದರವಿದೆ. ಅಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 119.66 ರೂ. ಮೊನ್ನೆಗೆ ಹೋಲಿಸಿದರೆ 1.12 ರೂ.ಗಳಷ್ಟು ಉತ್ತಮ ಏರಿಕೆಯಾಗಿದೆ. ಡೀಸೆಲ್ ಕೂಡ 1.06 ಏರಿಕೆಯಾಗಿದೆ. ಸದ್ಯ ಲೀಟರ್ ಡೀಸೆಲ್ ಬೆಲೆ 110.47 ರೂ. ಮುಂದೆ ಪೆಟ್ರೋಲ್ ದರ 120 ಕ್ಕೆ ತಲುಪುವ ಸಾಧ್ಯತೆ ಇದೆ.