ಪ್ರಧಾನಿ ಮೋದಿ ನೀಡಿದ ಕರೆ, ಸಂಸತ್ ಭವನ ಸಂಕೀರ್ಣದೊಳಗೆ ಪ್ಲಾಸ್ಟಿಕ್ ನಿಷೇಧ

Plastic Ban in Parliament Complex, call by the Prime Minister

ಪ್ರಧಾನಿ ಮೋದಿ ನೀಡಿದ ಕರೆ, ಸಂಸತ್ ಭವನ ಸಂಕೀರ್ಣದೊಳಗೆ ಪ್ಲಾಸ್ಟಿಕ್ ನಿಷೇಧ – Plastic Ban in Parliament Complex, call by the Prime Minister

ಪ್ರಧಾನಿ ಮೋದಿ ನೀಡಿದ ಕರೆ, ಸಂಸತ್ ಭವನ ಸಂಕೀರ್ಣದೊಳಗೆ ಪ್ಲಾಸ್ಟಿಕ್ ನಿಷೇಧ

ಕನ್ನಡ ನ್ಯೂಸ್ ಟುಡೇ – ನವದೆಹಲಿ: ಸಂಸತ್ ಭವನ ಸಂಕೀರ್ಣದೊಳಗೆ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್, ನೀರಿನ ಬಾಟಲಿಗಳು ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಲೋಕಸಭಾ ಸಚಿವಾಲಯ ನಿಷೇಧಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಸಂಸತ್ ಭವನ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯ ಮತ್ತು ಇತರ ಮಿತ್ರ ಸಂಸ್ಥೆಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರ್ದೇಶನಗಳನ್ನು ಪಾಲಿಸುವಂತೆ ಕೋರಲಾಗಿದೆ. ಬದಲಿಗೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಅವರಿಗೆ ಸೂಚಿಸಲಾಗಿದೆ.

“ಲೋಕಸಭಾ ಸಚಿವಾಲಯದ ಈ ಉಪಕ್ರಮವು ದೇಶವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸುವಂತೆ ಪ್ರಧಾನಮಂತ್ರಿಯವರು ಮಾಡಿದ ಕರೆಗೆ ಇಡಲಾಗತ್ತಿರುವ ಒಂದು ಹೆಜ್ಜೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ದೇಶ ಆಚರಿಸುವ ಅಕ್ಟೋಬರ್ 2 ರೊಳಗೆ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಈ ಉದ್ದೇಶವನ್ನು ಸಾಧಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ತಮ್ಮ ಭಾಷಣದಲ್ಲಿ ನಾಗರಿಕರನ್ನು ಕೋರಿದ್ದರು. ////