ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಕೇದಾರನಾಥದಲ್ಲಿರುವ ಜ್ಯೋತಿರ್ಲಿಂಗ ದೇಗುಲಕ್ಕೆ ಭೇಟಿ ನೀಡಿದರು (Kedarnath temple in Uttarakhand). ಅಲ್ಲಿ ಕೇದಾರೇಶ್ವರನಿಗೆ ಪೂಜೆ ಸಲ್ಲಿಸಿದರು. ಬಳಿಕ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು (Adi Shankaracharya statue in Kedarnath) ಅನಾವರಣಗೊಳಿಸಿದರು. 

ಕೇದಾರನಾಥ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಕೇದಾರನಾಥದಲ್ಲಿರುವ ಜ್ಯೋತಿರ್ಲಿಂಗ ದೇಗುಲಕ್ಕೆ ಭೇಟಿ ನೀಡಿದರು (Kedarnath temple in Uttarakhand). ಅಲ್ಲಿ ಕೇದಾರೇಶ್ವರನಿಗೆ ಪೂಜೆ ಸಲ್ಲಿಸಿದರು. ಬಳಿಕ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು (Adi Shankaracharya statue in Kedarnath) ಅನಾವರಣಗೊಳಿಸಿದರು.

2013ರ ಪ್ರವಾಹದಲ್ಲಿ ಹಾನಿಗೀಡಾದ ಶಂಕರಾಚಾರ್ಯರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಆದಿ ಗುರು ಶಂಕರಾಚಾರ್ಯರ ಪ್ರತಿಮೆಯು 12 ಅಡಿ ಎತ್ತರವಿದೆ.

ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ ಮೋದಿ
ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ ಮೋದಿ

ಬಾಬಾ ಕೇದಾರ ದೇವಸ್ಥಾನದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಇದೆ. ಸಮಾಧಿಯ ಜೀರ್ಣೋದ್ಧಾರ ಕಾರ್ಯವನ್ನು ಸ್ವತಃ ಮೋದಿ ಪರಿಶೀಲಿಸುತ್ತಿದ್ದಾರೆ. ಶಂಕರಾಚಾರ್ಯ ಪ್ರತಿಮೆಯ ಪುನರ್ ನಿರ್ಮಾಣ ಕಾರ್ಯ 2019 ರಿಂದ ಆರಂಭವಾಗಿದೆ. ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಸುಮಾರು 35 ಟನ್ ತೂಕದಲ್ಲಿ ನಿರ್ಮಿಸಲಾಗಿದೆ.

ಪ್ರಧಾನಿ ಮೋದಿ ಇಂದು ಬೆಳಗ್ಗೆ 8.30ಕ್ಕೆ ಕೇದಾರನಾಥ ತಲುಪಿದರು. ಕೇದಾರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಆರತಿ ನೀಡಿದರು. ಬಳಿಕ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು.

Stay updated with us for all News in Kannada at Facebook | Twitter
Scroll Down To More News Today