ಪ್ರಧಾನಿ ಮೋದಿ ಗೋರಖ್‌ಪುರ ಭೇಟಿ, ಸಾವಿರಾರು ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ

ಈ ಭೇಟಿಯ ವೇಳೆ ಪಿಎಂಒ 9,600 ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಪಿಎಂಒ ತಿಳಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಗೋರಖ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ರಸಗೊಬ್ಬರ ಕಾರ್ಖಾನೆ ಸೇರಿದಂತೆ ಹಲವು ಯೋಜನೆಗಳ ಉದ್ಘಾಟನೆ ನಡೆಯಲಿದೆ. ಈ ಭೇಟಿಯ ವೇಳೆ ಪಿಎಂಒ 9,600 ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಪಿಎಂಒ ತಿಳಿಸಿದೆ.

ಗೋರಖ್‌ಪುರದಲ್ಲಿರುವ ಏಮ್ಸ್ ಉತ್ತರ ಪ್ರದೇಶದ ಪೂರ್ವಾಂಚಲ ಜಿಲ್ಲೆಗಳಿಗೆ ಹಾಗೂ ನೆರೆಯ ಬಿಹಾರ ಮತ್ತು ನೇಪಾಳಕ್ಕೆ ಸೇವೆ ಸಲ್ಲಿಸಲಿದೆ. ಜುಲೈ 22, 2016 ರಂದು AIIMS ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಅದೇ ದಿನ ಶಂಕುಸ್ಥಾಪನೆ ಮಾಡಿದ ಗೋರಖ್‌ಪುರ ರಸಗೊಬ್ಬರ ಘಟಕವನ್ನು ಪ್ರಧಾನಿ ಇಂದು ದೇಶಕ್ಕೆ ಸಮರ್ಪಿಸಲಿದ್ದಾರೆ.

30 ವರ್ಷಕ್ಕೂ ಹೆಚ್ಚು ಕಾಲ ಮುಚ್ಚಿದ್ದ ರಸಗೊಬ್ಬರ ಘಟಕವನ್ನು 8,600 ಕೋಟಿ ರೂ. ವೆಚ್ಚದಲ್ಲಿ ಪುನರ್ನಿರ್ಮಾಣ ಮಾಡಲಾಗಿದೆ. ಸ್ಥಾವರವು ವಾರ್ಷಿಕವಾಗಿ 12.7 ಎಲ್‌ಎಂಟಿ ದೇಶೀಯ ಬೇವು ಲೇಪಿತ ಯೂರಿಯಾವನ್ನು ಉತ್ಪಾದಿಸುತ್ತದೆ. ಗೋರಖ್‌ಪುರದಲ್ಲಿ ಐಸಿಎಂಆರ್ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ನೂತನ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today