ಯುಪಿ ಚುನಾವಣೆ ಸಜ್ಜು: ಒಮ್ಮೆಲೇ 9 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ ಮೋದಿ

ಮುಂದಿನ ವರ್ಷ ನಡೆಯಲಿರುವ ಯುಪಿ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ. ಕಳೆದ ಐದು ದಿನಗಳಲ್ಲಿ ಯುಪಿಗೆ ಎರಡನೇ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಿದ್ಧಾರ್ಥ್ ನಗರಕ್ಕೆ ಆಗಮಿಸಿದರು. 

ಲಕ್ನೋ: ಮುಂದಿನ ವರ್ಷ ನಡೆಯಲಿರುವ ಯುಪಿ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ. ಕಳೆದ ಐದು ದಿನಗಳಲ್ಲಿ ಯುಪಿಗೆ ಎರಡನೇ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಿದ್ಧಾರ್ಥ್ ನಗರಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಿದ್ಧಾರ್ಥ್ ನಗರ್, ಎಟಾ, ಹರ್ದೋಯ್, ಪ್ರತಾಪ್‌ಗಢ್, ಫತೇಪುರ್, ಡಿಯೋರಿಯಾ, ಗಾಜಿಪುರ, ಮಿರ್ಜಾಪುರ ಮತ್ತು ಜೌನ್‌ಪುರ ಜಿಲ್ಲೆಗಳಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು.

ಮೋದಿಯವರು ಹಿಂದಿನ ಆಡಳಿತಗಾರರು ತಮ್ಮ ಕುಟುಂಬದ ಲಾಕರ್‌ಗಳನ್ನು ತುಂಬಿಸಿಕೊಳ್ಳುವಲ್ಲಿ ಸ್ವಾರ್ಥಿಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಒಂಬತ್ತು ಮೆಡಿಕಲ್ ಕಾಲೇಜುಗಳು ಒಮ್ಮೆಲೇ ತೆರೆದಿರುವುದನ್ನು ನೋಡಿದ್ದೀರಾ ಎಂದು ಅವರು ಕೇಳಿದರು. ಹಿಂದಿನ ಸರಕಾರಗಳಿಂದ ಪೂರ್ವಾಂಚಲದ ಜನತೆ ಬೆಚ್ಚಿಬಿದ್ದಿದ್ದು, ಅವರ ಅಧಿಕಾರಾವಧಿಯಲ್ಲಿ ಪೂರ್ವಾಂಚಲ ಪ್ರದೇಶವನ್ನು ಉತ್ತರದ ವೈದ್ಯಕೀಯ ಕೇಂದ್ರವನ್ನಾಗಿ ಮಾಡಲಾಗಿದೆ ಎಂದರು.

ಇದೇ ವೇಳೆ ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ 5,200 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today