Welcome To Kannada News Today

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಫ್ರಾನ್ಸ್‌ ಪ್ರವಾಸ, ಕಾರಣ ತಿಳಿಯಲು ಈ ಸುದ್ದಿ ನೋಡಿ

PM Narendra Modi to embark on two-day state visit to France

🌐 Kannada News :

ಕನ್ನಡ ನ್ಯೂಸ್ ಟುಡೇ – ನವದೆಹಲಿ :

ರಕ್ಷಣಾ ವಲಯ, ಕಡಲ ಭದ್ರತೆ, ಭಯೋತ್ಪಾದನೆ ನಿಗ್ರಹ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 22 ರಿಂದ ಫ್ರಾನ್ಸ್ ಪ್ರವಾಸದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ. ಮತ್ತು ನಾಗರಿಕ ಪರಮಾಣು ಶಕ್ತಿ ಜೊತೆಗೆ ದೃಡವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲ ಪಡಿಸಲು ಮುಂದಾಗಿದ್ದಾರೆ.

ಪ್ರಧಾನ ಮಂತ್ರಿ ಗುರುವಾರ ಸಂಜೆ ಫ್ರಾನ್ಸ್‌ಗೆ ತೆರಳಲಿದ್ದು, ಅಲ್ಲಿ ಮ್ಯಾಕ್ರನ್‌ರೊಂದಿಗಿನ ಮಾತುಕತೆಗೆ ತೊಡಗಲಿದ್ದಾರೆ, ಅವರು ಪ್ಯಾರಿಸ್ ನಿಂದ 60 ಕಿ.ಮೀ ದೂರದಲ್ಲಿರುವ ಓಯಿಸ್‌ನಲ್ಲಿರುವ 19 ನೇ ಶತಮಾನದ ತಾಣವಾದ ಚಟೌ ಡಿ ಚಾಂಟಿಲಿಯಲ್ಲಿ ಪ್ರಧಾನಿ ಮೋದಿಯವರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದಾರೆ.

ಫ್ರಾನ್ಸ್ ಭೇಟಿಯ ಸಮಯದಲ್ಲಿ, ಪ್ರಧಾನಿ ಪ್ಯಾರಿಸ್ನಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಿಡ್ ಡಿ ಏಗಲ್ನಲ್ಲಿ ಏರ್ ಇಂಡಿಯಾ ಅಪಘಾತಕ್ಕೆ ಒಳಗಾದ ಭಾರತೀಯ ಸಂತ್ರಸ್ತರಿಗಾಗಿ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.

ಡಿಜಿಟಲ್ ಮತ್ತು ಸೈಬರ್‌ಸ್ಪೇಸ್‌ನಂತಹ ಹೊಸ ಕ್ಷೇತ್ರಗಳಲ್ಲಿ ಮುಕ್ತ ಸಹಭಾಗಿತ್ವ, ಮತ್ತು ಕೌಶಲ್ಯ ಅಭಿವೃದ್ಧಿಯ ಕುರಿತು ಮಹತ್ವದ ಮಾತುಕತೆಗಳು ಭೇಟಿ ನೀಡುವ ಪ್ರಮುಖ ಒತ್ತು ಮತ್ತು ಈ ನಿಟ್ಟಿನಲ್ಲಿ ಒಪ್ಪಂದಗಳು ಎಂದು ಮಾಹಿತಿ ಮೂಲಗಳು ತಿಳಿಸಿವೆ. ////

Web Title : PM Narendra Modi to embark on two-day state visit to France

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile