ನೇಪಾಳಕ್ಕೆ ಆಗಮಿಸಿದ ಪ್ರಧಾನಿ ಮೋದಿ.. ನೇಪಾಳ ಪ್ರಧಾನಿ, ಸಚಿವರುಗಳಿಂದ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸ ಆರಂಭಿಸಿದ್ದಾರೆ. ಸೋಮವಾರದಿಂದ ನಾಲ್ಕು ದಿನಗಳ ಕಾಲ ನೇಪಾಳ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸ ಆರಂಭಿಸಿದ್ದಾರೆ. ಸೋಮವಾರದಿಂದ ನಾಲ್ಕು ದಿನಗಳ ಕಾಲ ನೇಪಾಳ ಪ್ರವಾಸ ಕೈಗೊಳ್ಳಲಿದ್ದಾರೆ. ನೇಪಾಳದಲ್ಲಿ ಗಡಿ ಸಮಸ್ಯೆ ಆರಂಭವಾದ ನಂತರ ಮೋದಿ ನೇಪಾಳಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ನೇಪಾಳಕ್ಕೆ ಆಗಮಿಸಿದ ಮೋದಿ ಅವರನ್ನು ನೇಪಾಳದ ಪ್ರಧಾನಿ, ಅವರ ಪತ್ನಿ ಮತ್ತು ಇತರ ಹಲವು ಸಚಿವರು ಆತ್ಮೀಯವಾಗಿ ಸ್ವಾಗತಿಸಿದರು.
ಆ ಬಳಿಕ ಬುದ್ಧ ಹುಣ್ಣಿಮೆಯನ್ನು ಆಚರಿಸಿದ ಮೋದಿ ಅಲ್ಲಿನ ಮಾಯಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಪಕ್ಕದ ಕಂಬದ ಬಳಿ ಇಬ್ಬರೂ ಮುಖಂಡರು ದೀಪಗಳನ್ನು ಬೆಳಗಿಸಿದರು. ನಂತರ ಬೋಧಿ ವೃಕ್ಷಕ್ಕೆ ನೀರುಣಿಸಿದರು. ನಂತರ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
Pm Visits Maya Devi Temple At Nepal
Follow Us on : Google News | Facebook | Twitter | YouTube