ಬೆಕ್ಕನ್ನು ಈ ಮುದುಕ ಏನ್ ಮಾಡಿದ ಗೊತ್ತಾ . . . !

police arrested the accused who dropped cat from the 15th floor

ಬೆಕ್ಕನ್ನು ಈ ಮುದುಕ ಏನ್ ಮಾಡಿದ ಗೊತ್ತಾ . . .

  • ಮುದಕನಿಗೆ ಕೋಪ ಬಂದಿತ್ತು, ಬೆಕ್ಕಿಗೆ ಆಯಸ್ಸು ಮಗಿದಿತ್ತು .
  • ನಮ್ಮ ಮನೆಗೆ ಬೆಕ್ಕು ಬಂತು ಅನ್ನೋ ಕೋಪ.
  • ಸಾಕು ಬೆಕ್ಕನ್ನು ಕಳೆದು ಕೊಂಡ ಅದರ ಯಜಮಾನ ಪೊಲೀಸ್ ಮೊರೆ.

ಥಾನೆ : ಆ ಬೆಕ್ಕು ಮಾಲೀಕನ ಅಚ್ಚು ಮೆಚ್ಚು , ಅದಕ್ಕೆ ಎಲ್ಲಾ ಸ್ವತಂತ್ರ್ಯ ನೀಡಿದ್ದ ಮಾಲೀಕ, ಇಡೀ ಕುಟುಂಬದ ಪ್ರೀತಿಯನ್ನು ಗಳಿಸಿತ್ತು ಆ ಬೆಕ್ಕು.

ಆದರೆ ಆ ದಿನ ಅದರ ದುರಾದೃಷ್ಟ ತನ್ನ ಪ್ರಾಣವನ್ನೇ ಕಳೆದು ಕೊಳ್ಳ ಬೇಕಾಯಿತು. ಅಕಸ್ಮಾತಾಗಿ ನೆರೆಯ ಮನೆಗೆ ತೆರಳಿದ ಬೆಕ್ಕನ್ನು ಆ ಮನೆಯ ಮಾಲೀಕ ಕೋಪದಿಂದ ಕೊಂದೇ ಬಿಟ್ಟ.

ತನ್ನ ಮನೆಯ ಬಾಲ್ಕನಿಗೆ ಬಂದ ಬೆಕ್ಕನ್ನು ಹಿಡಿದು 15 ನೇ ಮಹಡಿಯಿಂದ ನೆಲಕ್ಕೆ ಎಸೆದಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಥಾನೆ ನಗರದಲ್ಲಿ ನಡೆದಿದೆ. ಥಾನೆಯ ಎರಡಂತಸ್ತಿನಲ್ಲಿ ವಾಸವಿದ್ದ ಅಬ್ದುಲ್ ಶೇಕ್ ಅತಿ ಪ್ರೀತಿಯಿಂದ ಬೆಕ್ಕನ್ನು ಮುದ್ದಾಗಿ ಸಾಕಿದ್ದ.

ಬೆಕ್ಕು ಅದೇ ರಸ್ತೆಯಲ್ಲಿದ್ದ 15 ನೇ ಅಂತಸ್ತಿನ ಶಿವರಾಂ (64) ಎಂಬುವವರ ಮನೆ ಬಾಲ್ಕನಿಗೆ ಹೋಗಿದೆ , ಬೆಕ್ಕನ್ನು ನೋಡಿದ ಶಿವರಾಂಗೆ ಕೋಪ ಬಂದು , ಬೆಕ್ಕನ್ನು ಹಿಡಿದು 15 ನೇ ಅಂತಸ್ತಿನಿಂದ ಕೆಳಕ್ಕೆ ಬಿಸಾಡಿದ್ದಾನೆ . ಬಿದ್ದ ರಭಸಕ್ಕೆ ಬೆಕ್ಕು ಸ್ಥಳದಲ್ಲೇ ಅಸುನೀಗಿದೆ.

ಪ್ರೀತಿಯಿಂದ ಸಾಕಿದ ಬೆಕ್ಕು ಸಂಜೆಯಾದರೂ ಮನೆಗೆ ಬಾರದನ್ನು ಕಂಡು ಅದರ ಯಜಮಾನ ಗಾಬರಿಯಾಗಿದ್ದಾರೆ, ಇಂದಿಗೂ ಈ ರೀತಿ ಹೋಗದ ಬೆಕ್ಕು ಇಂದು ಎಲ್ಲಿ ಹೋಗಿರಬಹುದೆಂದು ಹುಡುಕಾಡಿದ್ದಾರೆ.

ಹಾಗೆ ಹುಡುಕುತ್ತಾ ಬಂದ ಮಾಲಿಕನಿಗೆ ತನ್ನ ಬೆಕ್ಕು ಸಿಕ್ಕಿದ್ದು ಸತ್ತ ಸ್ಥಿತಿಯಲ್ಲಿ. ತನ್ನ ಮಕ್ಕಳನ್ನೇ ಕಳೆದು ಕೊಂಡಷ್ಟು ದುಃಖ ಪಟ್ಟ ಯಜಮಾನ , ಅಷ್ಟಕ್ಕೇ ಸುಮ್ಮನಾಗದೆ ಅಲ್ಲಿದ್ದ ಎಲ್ಲಾ ಸಿ.ಸಿ.ಟಿ.ವಿ ಫುಟೇಜ್ ಪರಿಶೀಲಿಸಿ , ಬೆಕ್ಕಿನ ಸಾವಿಗೆ ಕಾರಣವಾದ ವೃದ್ಧ ಶಿವರಾಂ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಕೇಸ್ ದಾಖಲಿಸಿದ ಪೊಲೀಸರು , ಸಿ.ಸಿ.ಟಿ,ವಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ////

WebTitle : ಬೆಕ್ಕನ್ನು ಈ ಮುದುಕ ಏನ್ ಮಾಡಿದ ಗೊತ್ತಾ-police arrested the accused who dropped cat from the 15th floor

 >>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National  News Latest National  News Kannada   Latest Kannada News । Kannada Crime News