ಪಾಪ್ಯುಲರ್ ನ್ಯೂಸ್ ಆಂಕರ್ ಆತ್ಮಹತ್ಯೆ, ಕಾರಣ ನಿಗೂಢ

Popular News anchor dies after falling from fourth floor

ಪಾಪ್ಯುಲರ್ ನ್ಯೂಸ್ ಆಂಕರ್ ಆತ್ಮಹತ್ಯೆ, ಕಾರಣ ನಿಗೂಢ

  • ಪ್ರಮುಖ ಸುದ್ದಿ ನಿರೂಪಕಿ ರಾಧಿಕಾ ಕೌಶಿಕ್ ಆತ್ಮಹತ್ಯೆ
  • ಸಾವಿನ ಸುತ್ತ , ಸಹೋದ್ಯೋಗಿ ಬಗ್ಗೆ ಅನುಮಾನಗಳು
  • ನಾಲ್ಕನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ರಾಧಿಕಾ 

ಪ್ರಖ್ಯಾತ ಸುದ್ದಿ ನಿರೂಪಕಿ ರಾಧಿಕಾ ಕೌಶಿಕ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಡಿದ್ದು, ಶುಕ್ರವಾರ ಬೆಳಿಗ್ಗೆ, 3.30 ಕ್ಕೆ, ತನ್ನ ಮನೆಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾರ್ಕಿಂಗ್ ಪ್ರದೇಶದಲ್ಲಿ, ಮೃತದೇಹ ಕಂಡ ವಾಚ್ಮೆನ್ ಪೋಲಿಸರಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಘಟನೆ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ರಾಧಿಕಾ ಕೌಶಿಕ್ ಎಂದು ಗುರುತಿಸಿದ್ದಾರೆ.

ತದನಂತರ ಸಂಬಂಧಿಗಳಿಗೆ ವಿಷಯ ಮುಟ್ಟಿಸಿ , ಪೋಸ್ಟ್ ಮಾರ್ಟಮ್ ಗೆ ಸಾಗಿಸಿದ್ದಾರೆ. ಈ ನಡುವೆ ರಾಧಿಕಾ ಸಹೋದ್ಯೋಗಿ ಹಾಗೂ ಸ್ನೇಹಿತ ರಾಹುಲ್ ರನ್ನು ತಮ್ಮ ಕಸ್ಟಡಿಗೆ ತೆಗೆದು ಕೊಂಡು ವಿಚಾರಣೆ ನಡೆಸಿದ್ದಾರೆ.

ಪ್ರಾಥಾಮಿಕ ವರದಿಯಂತೆ , ಅಂದು ರಾಧಿಕಾ ಮತ್ತು ರಾಹುಲ್ ಇಬ್ಬರೂ ಮಧ್ಯ ಸೇವಿಸಿದ್ದಾರೆ, ಈ ವೇಳೆ ಉಂಟಾದ ಘರ್ಷಣೆಯೇ ಸಾವಿಗೆ ಕಾರಣ ಎನ್ನಲಾಗಿದೆ. ಆದರೆ ರಾಹುಲ್ ,” ತಾನು ವಾಶ್ ರೂಮ್ ಗೆ ಹೋಗಿದ್ದಾಗ , ರಾಧಿಕಾ ಈ ರೀತಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.

ಸಧ್ಯ ಪೋಸ್ಟ್ ಮಾರ್ಟಮ್ ವರದಿ ಬಂದ ಮೇಲೆ ಸಾವಿನ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ್ ನ ಮೂಲದವರಾದ ರಾಧಿಕಾ ಕೌಶಿಕ್ ಸ್ಥಳೀಯ ಸುದ್ದಿ ಚಾನಲ್ನಲ್ಲಿ ವರದಿಗಾರಳಾಗಿ  ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ನೋಯ್ಡಾಗೆ ವರ್ಗಾಯಿಸಲ್ಪಟ್ಟಿದ್ದರು ಎಂದು ತೋರುತ್ತದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ರಾಧಿಕಾ ನೊಯ್ಡಾಗೆ ತೆರಳಿದಿದ್ದರು. ಏತನ್ಮಧ್ಯೆ, ವಿಷಯ ತಿಳಿದು ಆಕೆಯ ಕುಟುಂಬ ಸದಸ್ಯರು ದುಃಖ ಸಾಗರದಲ್ಲಿ ಮುಳುಗಿದೆ.////

WebTitle : ಪಾಪ್ಯುಲರ್ ನ್ಯೂಸ್ ಆಂಕರ್ ಆತ್ಮಹತ್ಯೆ, ಕಾರಣ ನಿಗೂಢ-Popular News anchor dies after falling from fourth floor

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National News KannadaNational News Latest