ಶಾಲಾ ಗೋಡೆ ಮೇಲೆ ಅಶ್ಲೀಲ ಚಿತ್ರ-ವಿಧ್ಯಾರ್ಥಿನಿಯರಿಂದ ಆತ್ಮಹತ್ಯೆ ಯತ್ನ

Pornography on the wall poisoned by 5 girls

ಶಾಲಾ ಗೋಡೆ ಮೇಲೆ ಅಶ್ಲೀಲ ಚಿತ್ರ-ವಿಧ್ಯಾರ್ಥಿನಿಯರಿಂದ ಆತ್ಮಹತ್ಯೆ ಯತ್ನ

ರಾಷ್ಟ್ರೀಯ : ತಮಿಳುನಾಡು : 7 ನೇ ತರಗತಿಯ ಐದು ವಿಧ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ತಮ್ಮ ಶಾಲಾ ಗೋಡೆಗಳ ಮೇಲೆ ಯುವತಿಯರ ಹೆಸರುಗಳನ್ನು ಬರೆದು ಅಶ್ಲೀಲ ಚಿತ್ರಗಳನ್ನು ಅಂಟಿಸಿದ್ದ ಕಿಡಿಗೇಡಿಗಳ ಕೃತ್ಯಕ್ಕೆ ಯುವತಿಯರು ಈ ನಿರ್ಧಾರಕ್ಕೆ ಬಂದಿದ್ದರು.

ಹೌದು , ವಿಧ್ಯಾರ್ಥಿನಿಯರ ಹೆಸರ ಜೊತೆಗೆ ಅಶ್ಲೀಲ ಚಿತ್ರಗಳನ್ನು ಅಂಟಿಸಿದ್ದ ಕಿಡಿಗೇಡಿಗಳ ವಿಕೃತ ಆನಂದಕ್ಕೆ ಇನ್ನೇನು ಐದು ವಿದ್ಯಾರ್ಥಿಗಳು ಪ್ರಾಣ ಕಳೆದು ಕೊಳ್ಳಬೇಕಿತ್ತು.

ಸಧ್ಯ ಎಲ್ಲಾ ವಿಧ್ಯಾರ್ಥಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು , ಯಾವುದೇ ಭಯವಿಲ್ಲ ಎಂದು ವೈದ್ಯ ಮೂಲಗಳು ತಿಳಿಸಿವೆ.

ಪೊಲೀಸರ ಮಾಹಿತಿ ಪ್ರಕಾರ , ಅಶ್ಲೀಲ ಚಿತ್ರಗಳ ಜೊತೆ ತಮ್ಮ ಹೆಸರನ್ನು ನೋಡಿದ ಯುವತಿಯರು ಆ ಬಗ್ಗೆ ತೀವ್ರ ಜಿಗುಪ್ಸೆಗೆ ಒಳಗಾಗಿದ್ದಾರೆ , ಆ ಘಟನೆ ಅವರಿಗೆ ದುಃಖ ತರಿಸಿದೆ , ಇದೆ ಕಾರಣಕ್ಕೆ ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪೊಲೀಸರು ಬಲೇ ಬೀಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು , ಪ್ರಕರಣ ದಾಖಲಿಸಿದ್ದಾರೆ. ////

WebTitle : ಶಾಲಾ ಗೋಡೆ ಮೇಲೆ ಅಶ್ಲೀಲ ಚಿತ್ರ-ವಿಧ್ಯಾರ್ಥಿನಿಯರಿಂದ ಆತ್ಮಹತ್ಯೆ ಯತ್ನ-Pornography on the wall poisoned by 5 girls

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National News LatestNational News KannadaKannada Crime News