ಮುನ್ನಡೆ ಕಾಯ್ದುಕೊಂಡ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

Prime Minister Modi and Rahul Gandhi have taken the lead

ಮುನ್ನಡೆ ಕಾಯ್ದುಕೊಂಡ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ – Prime Minister Modi and Rahul Gandhi have taken the lead

ಮುನ್ನಡೆ ಕಾಯ್ದುಕೊಂಡ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

ಪ್ರಧಾನ ಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿಯಲ್ಲಿರುವ ಪ್ರಧಾನ ಅಭ್ಯರ್ಥಿಗಳಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಹ ಮುಂಚೂಣಿಯಲ್ಲಿದ್ದಾರೆ, ನರೇಂದ್ರ ಮೋದಿ ಕಾಶಿಯ ವಾರಣಾಸಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪ್ರಧಾನ ಅಭ್ಯರ್ಥಿಗಳಾಗಿದ್ದು ಇವರ ಸೋಲು ಗೆಲುವಿನ ಲೆಕ್ಕಾಚಾರ ಅವರ ಘನತೆಯನ್ನು ಎತ್ತಿಹಿಡಿಯುವ ಸಾಧ್ಯತೆ ಇರುತ್ತದೆ. ಈ ಮೂಲಕ ಇಬ್ಬರೂ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲತೆ ಕಾಣುತ್ತಿದ್ದಾರೆ.

2014 ರಲ್ಲಿ ಮೋದಿ ಅವರು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ವಿರುದ್ಧ ಭಾರಿ ಜಯ ಸಾಧಿಸಿದ್ದನ್ನು ನಾವಿಲ್ಲಿ ನೆನೆಯಬಹುದು. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಕೇರಳದಲ್ಲಿ ಮುನ್ನಡೆಸಾಧಿಸಿದ್ದಾರೆ.

ಈ ಮೂಲಕ ಲೋಕ ಸಮರದ ಕುತೂಹಲ ಇನ್ನಷ್ಟು ಹೆಚ್ಚಿದ್ದು ಹಂತ ಹಂತದ ಫಲಿತಾಂಶಗಳಿಗೂ ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ತೀವ್ರ ಆಸಕ್ತಿ ತೋರಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿರವರು ಸಹ 8,326 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅವರು ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಿಂದ ಮುನ್ನಡೆಸಾಧಿಸಿದ್ದಾರೆ. ಪ್ರಸ್ತುತ, ಅವರು 8,326 ಮತಗಳೊಂದಿಗೆ ಮುಂದುವರಿಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಸೋನಿಯಾ ಗಾಂಧಿಯವರ ವಿರುದ್ಧ ಸ್ಪರ್ಧಿಸಿದ್ದಾರೆ. 2019 ರ ಚುನಾವಣೆಯ ಮೊದಲು ದಿನೇಶ್ ಪ್ರತಾಪ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. 2014 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಜಯ್ ಅಗರ್ವಾಲ್ ಸೋನಿಯಾ ಗಾಂಧಿ ಅವರನ್ನು 4 ಲಕ್ಷ ಮತಗಳಿಂದ ಗೆದ್ದಿದ್ದರು.////