COVID-19 : ಪ್ರಧಾನಿ ನರೇಂದ್ರ ಮೋದಿಯಿಂದ ವಿಡಿಯೋ ಕಾನ್ಫರೆನ್ಸಿಂಗ್, ಲಾಕ್ ಡೌನ್ ಇನ್ನಷ್ಟು ಬಿಗಿ

Prime Minister Narendra Modi video conferencing with social welfare organisations

ನವದೆಹಲಿ : ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ, ಜನರಿಗೆ ಯಾವುದೇ ಮಾರ್ಗ ಸೂಚಿ ಹೊರಡಿಸಿದರೂ ಪ್ರಸ್ತುತ ಸ್ಥಿತಿಯ ಅರಿವಾಗುತ್ತಿಲ್ಲ, ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕೊರೊನವೈರಸ್ ತಡೆಗೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪಿಎಂ ಮೋದಿ, COVID-19 ಗೆ ಸಂಬಂಧಿಸಿದ ಮೂಡನಂಬಿಕೆಗಳು, ಮತ್ತು ತಪ್ಪು ಮಾಹಿತಿಯನ್ನು ಎದುರಿಸುವಲ್ಲಿ ಅಥವಾ ತಡೆಯುವಲ್ಲಿ ಸಾಮಾಜಿಕ ಸಂಸ್ಥೆಗಳ ದೊಡ್ಡ ಪಾತ್ರವಿದೆ, ಎಂದರು.

“ಅನಾವಶ್ಯಕವಾಗಿ, ಜನರು ಒಂದು ಸ್ಥಳಗಳಲ್ಲಿ ಗುಂಪು ಗುಂಪಾಗಿ ಒಟ್ಟುಗೂಡುತ್ತಾರೆ ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಮೀರುತ್ತಿದ್ದಾರೆ. ವೈರಸ್ ಹರಡುವುದನ್ನು ತಪ್ಪಿಸಲು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಮತ್ತಷ್ಟು ಹರಡುವುದು ಅವಶ್ಯಕ ”ಎಂದು ಪಿಎಂ ಮೋದಿ ಹೇಳಿದರು.

ಅಲ್ಲದೆ, ಸವಾಲನ್ನು ಜಯಿಸಲು ರಾಷ್ಟ್ರಕ್ಕೆ ಅಲ್ಪಾವಧಿಯ ಕ್ರಮಗಳು ಮತ್ತು ದೀರ್ಘಕಾಲೀನ ದೃಷ್ಟಿ ಎರಡೂ ಬೇಕು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದರು.

Web Title : Prime Minister Narendra Modi video conferencing with social welfare organisations
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube ಅನುಸರಿಸಿ.