Video: ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಹಿಂಸಾಚಾರ, ಬಿಹಾರದ ರೈಲು ನಿಲ್ದಾಣದಲ್ಲಿ ಬೆಂಕಿ
ಹೊಸ ಸೇನಾ ನೇಮಕಾತಿ ನೀತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇಂದು ಬಿಹಾರದ ಲಖ್ಮಿನಿಯಾ ರೈಲು ನಿಲ್ದಾಣಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರೈಲು ಹಳಿ ಧ್ವಂಸಗೊಂಡಿದ್ದು, ರೈಲುಗಳನ್ನು ನಿಲ್ಲಿಸಲಾಗಿದೆ.
ಪಾಟ್ನಾ (Patna): ಅಗ್ನಿಪಥ್ ಯೋಜನೆ (Agneepath scheme) ವಿರುದ್ಧ ದೇಶಾದ್ಯಂತ ಹಿಂಸಾಚಾರ (Violence continues) ಮುಂದುವರಿದಿದೆ. ಹೊಸ ಸೇನಾ ನೇಮಕಾತಿ ನೀತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇಂದು ಬಿಹಾರದ (Bihar) ಲಖ್ಮಿನಿಯಾ ರೈಲು ನಿಲ್ದಾಣಕ್ಕೆ ( Lakhminia Railway Station) ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರೈಲು ಹಳಿ ಧ್ವಂಸಗೊಂಡಿದ್ದು, ರೈಲುಗಳನ್ನು ನಿಲ್ಲಿಸಲಾಗಿದೆ.
ರಕ್ಷಣಾ ಇಲಾಖೆಯು ನಾಲ್ಕು ವರ್ಷಗಳ ಉದ್ಯೋಗದ ಹೆಸರಿನಲ್ಲಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿದೆ… ಇದರ ಬೆನ್ನಲ್ಲೇ ಬಾರೀ ಪ್ರತಿಭಟನೆಗಳು ವ್ಯಕ್ತವಾಗಿದೆ. ಪ್ರತಿಭಟನಾಕಾರರು ಭಾಗಲ್ಪುರ ಮತ್ತು ನವದೆಹಲಿ ನಡುವಿನ ವಿಕ್ರಮಶಿಲಾ ಎಕ್ಸ್ಪ್ರೆಸ್ ಮತ್ತು ಜಮ್ಮೋಟಾವಿ-ಗುವಾಹಟಿ ಎಕ್ಸ್ಪ್ರೆಸ್ ರೈಲುಗಳಿಗೆ ಬೆಂಕಿ ಹಚ್ಚಿದರು. ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಲು 72 ಗಂಟೆಗಳ ಗಡುವು ನೀಡಲಾಗಿದೆ.
ಸಿಕಂದರಾಬಾದ್ ರೈಲು ನಿಲ್ದಾಣದಲ್ಲೂ ಸೇನಾ ಅಭ್ಯರ್ಥಿಗಳು ವಿಧ್ವಂಸಕ ಕೃತ್ಯ ಎಸಗಿದ್ದಾರೆ. ನಿಲ್ದಾಣದಲ್ಲಿದ್ದ ಪೀಠೋಪಕರಣಗಳು ನಾಶವಾಗಿವೆ. ಪ್ಲಾಟ್ಫಾರ್ಮ್ನಲ್ಲಿದ್ದ ರೈಲಿಗೆ ಬೆಂಕಿ ಹಚ್ಚಲಾಗಿದೆ. ಎಸಿ ಬೋಗಿಯ ಕನ್ನಡಿಗಳು ಜಖಂಗೊಂಡಿವೆ. ಗೂಡ್ಸ್ ರೈಲಿನಲ್ಲಿದ್ದ ಸರಕುಗಳನ್ನು ಹಳಿಗಳ ಮೇಲೆ ಎಸೆದಿದ್ದಾರೆ. ಪ್ಲಾಟ್ ಫಾರ್ಮ್ ಮೇಲಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಭಯಭೀತರಾದ ಪ್ರಯಾಣಿಕರು ನಿಲ್ದಾಣದಿಂದ ಹೊರಬಂದ ದೃಶ್ಯ ಕಂಡುಬಂತು.
ಈ ನಡುವೆ ” ವಯೋಮಿತಿ ಹೆಚ್ಚಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿಲ್ಲ.ಇ ದರಿಂದ ದೇಶದ ಯುವಕರು ಸೇನೆಗೆ ಸೇರಲು ಸಾಧ್ಯವಾಗುತ್ತಿಲ್ಲ. ಇದರಿಂದ ಸೇನಾ ಅಭ್ಯರ್ಥಿಗಳ ವಯೋಮಿತಿಯನ್ನು 21ರಿಂದ 23 ವರ್ಷಗಳವರೆಗೆ,” ಹೆಚ್ಚಿಸಲಾಗಿದೆ ಎಂದು ಸಿಂಗ್ ಹೇಳಿದರು.
Protesters In Bihar Vandalised Lakhminia Railway Station And Block Railway Tracks
#WATCH | Bihar: Protesting against #AgnipathRecruitmentScheme, agitators vandalise Lakhminia Railway Station and block railway tracks here. pic.twitter.com/H7BHAm8UIg
— ANI (@ANI) June 17, 2022
Follow Us on : Google News | Facebook | Twitter | YouTube