ಪೆಟ್ರೋಲ್ ಬೆಲೆ 10 ರೂ ಮತ್ತು ಡೀಸೆಲ್ ಬೆಲೆ 5 ರೂ ಕಡಿತಗೊಳಿಸಿದ ಪಂಜಾಬ್ ಸಿಎಂ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುತ್ತಿರುವ ರಾಜ್ಯಗಳ ಪಟ್ಟಿಗೆ ಪಂಜಾಬ್ ಕೂಡ ಸೇರ್ಪಡೆಯಾಗಿದೆ. ಪೆಟ್ರೋಲ್ ಬೆಲೆಯನ್ನು 10 ರೂಪಾಯಿ ಮತ್ತು ಡೀಸೆಲ್ ಬೆಲೆಯನ್ನು 5 ರೂಪಾಯಿ ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ

🌐 Kannada News :

ಚಂಡೀಗಢ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುತ್ತಿರುವ ರಾಜ್ಯಗಳ ಪಟ್ಟಿಗೆ ಪಂಜಾಬ್ ಕೂಡ ಸೇರ್ಪಡೆಯಾಗಿದೆ. ಪೆಟ್ರೋಲ್ ಬೆಲೆಯನ್ನು 10 ರೂಪಾಯಿ ಮತ್ತು ಡೀಸೆಲ್ ಬೆಲೆಯನ್ನು 5 ರೂಪಾಯಿ ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕಡಿತ ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಇಂಧನ ಬೆಲೆ ಗಗನಮುಖಿಯಾಗಿದೆ. ಇತ್ತೀಚೆಗಿನ ಮೂರು ಲೋಕಸಭೆ ಮತ್ತು 30 ವಿಧಾನಸಭಾ ಉಪಚುನಾವಣೆಗಳ ಫಲಿತಾಂಶದಿಂದ ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಆಘಾತವಾಗಿದೆ.

ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬ ಜನ ಸಾಮಾನ್ಯರಿಗೆ ಕೊಂಚ ನೆಮ್ಮದಿ ನೀಡಿದೆ. ಕೇಂದ್ರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ. ಮತ್ತು ಡೀಸೆಲ್ ಮೇಲೆ 10 ರೂ. ಇಳಿಸಿದೆ.

ಆ ನಂತರ, ಹಲವಾರು ರಾಜ್ಯ ಸರ್ಕಾರಗಳು ಕೇಂದ್ರದಂತೆ ಸುಂಕ ಇಳಿಕೆ ನಿರ್ದಾರ ಕೈಗೊಂಡವು. ಅಬಕಾರಿ ಸುಂಕಕ್ಕೆ ಅನುಗುಣವಾಗಿ ವ್ಯಾಟ್ ಅನ್ನು ಹೆಚ್ಚಿಸಿದ ಹಲವಾರು ರಾಜ್ಯ ಸರ್ಕಾರಗಳು ಈಗ ಅದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ.

ಕರ್ನಾಟಕ, ಅಸ್ಸಾಂ, ಗುಜರಾತ್, ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ, ಮಣಿಪುರ, ತ್ರಿಪುರಾ ಮತ್ತು ಒಡಿಶಾ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿವೆ. ಈಗ ಪಂಜಾಬ್ ಕೂಡ ಈ ಪಟ್ಟಿಗೆ ಸೇರಿಕೊಂಡಿದೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today