ಚಿದಂಬರಂ ಬೆಂಬಲಕ್ಕೆ ನಿಂತ ರಾಹುಲ್, ಪ್ರಿಯಾಂಕಾ

Rahul, Priyanka come out in Chidambaram's support

ಚಿದಂಬರಂ ಬೆಂಬಲಕ್ಕೆ ನಿಂತ ರಾಹುಲ್, ಪ್ರಿಯಾಂಕಾ – Rahul, Priyanka come out in Chidambaram’s support

ಚಿದಂಬರಂ ಬೆಂಬಲಕ್ಕೆ ನಿಂತ ರಾಹುಲ್, ಪ್ರಿಯಾಂಕಾ

ಕನ್ನಡ ನ್ಯೂಸ್ ಟುಡೇ – ನವದೆಹಲಿ : ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನ ಭೀತಿಯನ್ನು ಎದುರಿಸುತ್ತಿರುವ ಪಿ ಚಿದಂಬರಂ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮುಂದಾಗಿದ್ದಾರೆ.

ಚಿದಂಬರಂ ವಿರುದ್ಧದ ಅಧಿಕಾರ ದುರುಪಯೋಗವನ್ನು ರಾಹುಲ್ ಖಂಡಿಸಿದರೆ, ಕಾಂಗ್ರೆಸ್ ನಾಯಕರ ಪರವಾಗಿ ನಿಂತು ಸತ್ಯಕ್ಕಾಗಿ ಹೋರಾಡುವುದನ್ನು ಮುಂದುವರೆಸುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಜ್ಞೆ ಮಾಡಿದ್ದಾರೆ. ಅಧಿಕಾರದ ಈ ಅವಮಾನಕರ ದುರುಪಯೋಗವನ್ನು ನಾನು ಬಲವಾಗಿ ಖಂಡಿಸುತ್ತೇನೆ “ಎಂದು ರಾಹುಲ್ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

ಅತ್ಯಂತ ಅರ್ಹವಾದ ಮತ್ತು ರಾಜ್ಯಸಭೆಯ ಗೌರವಾನ್ವಿತ ಸದಸ್ಯ ಪಿ.ಚಿದಂಬರಂ ಜಿ ಅವರು ಹಣಕಾಸು ಸಚಿವರು ಮತ್ತು ಗೃಹ ಸಚಿವರು ಸೇರಿದಂತೆ ದಶಕಗಳಿಂದ ನಮ್ಮ ರಾಷ್ಟ್ರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಅಂತಹರ ಮೇಲೆ ಅಧಿಕಾರ ದುರ್ಭಳಕೆ  ದೂಷಿಸಲಾಗಿದೆ. ನಾವು ಅವರ ಪರವಾಗಿ ನಿಲ್ಲುತ್ತೇವೆ ಮತ್ತು ಪರಿಣಾಮಗಳು ಏನೇ ಇರಲಿ ಸತ್ಯಕ್ಕಾಗಿ ಹೋರಾಡುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ.

ಕೇಂದ್ರ ತನಿಖಾ ದಳ ( ಸಿಬಿಐ ) ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಪ್ರಕರಣದಲ್ಲಿ ಚಿದಂಬರಂ ತನಿಖೆ ಎದುರಿಸುತ್ತಿದ್ದಾರೆ.///