ರಜನಿಕಾಂತ್​ ಆರೋಗ್ಯದಲ್ಲಿ ಮತ್ತೆ ಏರುಪೇರು

ಆರೋಗ್ಯದಲ್ಲಿ ಏರುಪೇರಾದ ಕಾರಣ ರಜನಿಕಾಂತ್ ಮತ್ತೆ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ, ತಲೈವಾ ರಜನಿಕಾಂತ್​ ಸದ್ಯ ತಮ್ಮ ಆರೋಗ್ಯದ ಏರುಪೇರಿನಿಂದಾಗಿ ಚಿಕಿತ್ಸೆಗೆ ಅಮೆರಿಕಾಗೆ ತೆರಳಿದ್ದಾರೆ

ರಜನಿಕಾಂತ್​ ಆರೋಗ್ಯದಲ್ಲಿ ಮತ್ತೆ ಏರುಪೇರು

(Kannada News) : ಆರೋಗ್ಯದಲ್ಲಿ ಏರುಪೇರಾದ ಕಾರಣ ರಜನಿಕಾಂತ್ ಮತ್ತೆ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ, ತಲೈವಾ ರಜನಿಕಾಂತ್​ ಸದ್ಯ ತಮ್ಮ ಆರೋಗ್ಯದ ಏರುಪೇರಿನಿಂದಾಗಿ ಚಿಕಿತ್ಸೆಗೆ ಅಮೆರಿಕಾಗೆ ತೆರಳಿದ್ದಾರೆ.

ಅನಾರೋಗ್ಯದಿಂದ ಹೈದ್ರಾಬಾದ್​ ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ರಜನಿಕಾಂತ್, ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು.

ಈ ನಡುವೆ ರಕ್ತದೊತ್ತಡ ಏರುಪೇರಾಗಿದ್ದು, ರಜನಿ ಆರೋಗ್ಯ ಪೂರ್ಣವಾಗಿ ಸುಧಾರಿಸಿರಲಿಲ್ಲ. ಚಿಕಿತ್ಸೆ ಪಡೆದು ಇತ್ತೀಚಿಗಷ್ಟೇ ಆಸ್ಪತ್ರೆಯಿಂದ ಹೊರ ಬಂದಿದ್ದರು, ಪೂರ್ಣವಾಗಿ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ರಜನಿಕಾಂತ್ ಈಗ ಮತ್ತೆ ಚಿಕಿತ್ಸೆಗೆ ಅಮೆರಿಕಾಗೆ ತೆರಳಿದ್ದಾರೆ.

ರಜನಿಕಾಂತ್​ ಆರೋಗ್ಯದಲ್ಲಿ ಮತ್ತೆ ಏರುಪೇರು
ರಜನಿಕಾಂತ್​ ಆರೋಗ್ಯದಲ್ಲಿ ಮತ್ತೆ ಏರುಪೇರು

ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಬೇಕಿದ್ದ ತಲೈವಾಗೆ ಆರೋಗ್ಯ ಕೈಕೊಟ್ಟಿರುವುದು ಅವರ ಅಭಿಮಾನಿಗಳಿಗೆ ಅತೀವ ನೋವುಂಟು ಮಾಡಿದೆ.

ರಜನಿಕಾಂತ್ ಅನಾರೋಗ್ಯದ ವಿಚಾರ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ.

ಆದರೆ ರಜನಿಕಾಂತ್ ಸದ್ಯಕ್ಕೆ ರಾಜಕೀಯದಿಂದ ದೂರವಿರಲಿದ್ದಾರೆ. ಆದರೆ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ.

ಅಣ್ಣಾತೆ ಚಿತ್ರದ ಶೂಟಿಂಗ್ ಅದಾಗಲೇ ನಡೀತಿದ್ದು, ರಜನಿ ಸಂಪೂರ್ಣ ಗುಣಮುಖರಾದ ನಂತರ ಮತ್ತೆ ಶೂಟಿಂಗ್ ಮುಂದುವರೆಯಲಿದೆ.

Web Title : Rajinikanth gone to the US for treatment

Recently Rajinikanth was hospitalized in Hyderabad due to illness. In the meantime, blood pressure has fluctuated and Rajni’s health has not improved. Having recently been discharged from the hospital, the problem remains unresolved. Thus Rajani again Went to the US for treatment.