ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಪೆರೋಲ್ ವಿಸ್ತರಣೆಗಾಗಿ ಹೈಕೋರ್ಟ್ ಮೊರೆ
Rajiv Gandhi case convict Nalini moves HC for parole extension
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಪೆರೋಲ್ ವಿಸ್ತರಣೆಗಾಗಿ ಹೈಕೋರ್ಟ್ ಮೊರೆ – Rajiv Gandhi case convict Nalini moves HC for parole extension
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಪೆರೋಲ್ ವಿಸ್ತರಣೆಗಾಗಿ ಹೈಕೋರ್ಟ್ ಮೊರೆ
ಕನ್ನಡ ನ್ಯೂಸ್ ಟುಡೇ – ಚೆನ್ನೈ: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿರುವ ನಳಿನಿ ಶ್ರೀಹರನ್ ತನ್ನ ಪೆರೋಲ್ ಅನ್ನು ಮತ್ತೊಂದು ತಿಂಗಳು ಕಾಲ ವಿಸ್ತರಿಸುವಂತೆ ಮದ್ರಾಸ್ ಹೈ ಕೋರ್ಟ್ ಗೆ ಮನವಿಮಾಡಿದ್ದಾರೆ. ಹತ್ಯೆ ಪ್ರಕರಣದಲ್ಲಿ ಜೀವಾವಧಿ ಅನುಭವಿಸುತ್ತಿರುವ ನಳಿನಿಗೆ ಜುಲೈ ೨೫ ರಂದು ನ್ಯಾಯಾಲಯ ಒಂದು ತಿಂಗಳು ಪೆರೋಲ್ ಮಂಜೂರು ಮಾಡಿತ್ತು.
ಇದೀಗ ” ತನ್ನ ಮಗಳ ಮದುವೆಯ ಏರ್ಪಾಟಿನ ಕೆಲಸಗಳು ಇನ್ನು ಪೂರ್ಣ ಗೊಂಡಿಲ್ಲ, ಅದಕ್ಕಾಗಿ ಮತ್ತೆ ಒಂದು ತಿಂಗಳು ಪೆರೋಲ್ ನೀಡಲು ಅನುಮತಿ ನೀಡಬೇಕು ಎಂದು ಆಕೆ ಮದ್ರಾಸ್ ಹಾಯ್ ಕೋರ್ಟ್ ಗೆ ಪಿಟಿಷನ್ ಸಲ್ಲಿಸಿದ್ದಾಳೆ. ತನ್ನ ಪೆರೋಲ್ ಅನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ಆಕೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾಳೆ.
ತಮ್ಮ ಅರ್ಜಿಯಲ್ಲಿ ನಳಿನಿ “ತಮ್ಮ ಮಗಳು ಲಂಡನ್ನಲ್ಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಭಾರತಕ್ಕೆ ಬರಲಿದ್ದಾಳೆ, ಅದಕ್ಕಾಗಿ ಮದುವೆಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು” ಎಂದು ಕೋರಿದ್ದಾರೆ. ಜೈಲಿನ ಮುಖ್ಯಸ್ಥ ತನ್ನ ಮನವಿಯನ್ನು ನಿರಾಕರಿಸಿದ ನಂತರ ನಳಿನಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾಳೆ ಎನ್ನಲಾಗಿದೆ. ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಮತ್ತು ನ್ಯಾಯಮೂರ್ತಿ ಎಂ.ನಿರ್ಮಲ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಈ ವಿಚಾರವಾಗಿ ಗುರುವಾರದ ಒಳಗೆ ರಾಜ್ಯ ಸರ್ಕಾರವು ಉತ್ತರಿಸುವಂತೆ ಆದೇಶಿಸಿದೆ.////
Web Title : Rajiv Gandhi case convict Nalini moves HC for parole extension