Rajya Sabha Elections: 13 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ದೇಶದಲ್ಲಿ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಆರು ರಾಜ್ಯಗಳ 13 ರಾಜ್ಯಸಭಾ ಚುನಾವಣೆಗಳಿಗೆ ಚುನಾವಣೆ ನಡೆಸುವ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿ) ಪ್ರಕಟಿಸಿದೆ.

ದೆಹಲಿ: ದೇಶದಲ್ಲಿ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಆರು ರಾಜ್ಯಗಳ 13 ರಾಜ್ಯಸಭಾ ಚುನಾವಣೆಗಳಿಗೆ ಚುನಾವಣೆ ನಡೆಸುವ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿ) ಪ್ರಕಟಿಸಿದೆ.

ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ 5, ಕೇರಳದ 3, ಅಸ್ಸಾಂನಲ್ಲಿ 2, ಹಿಮಾಚಲ ಪ್ರದೇಶ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಗಣ್ಯರಾದ ಆನಂದ್ ಶರ್ಮಾ, ಎ.ಕೆ.ಆಂಟನಿ ಸೇರಿದಂತೆ 13 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್ ನಲ್ಲಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬಿಡುಗಡೆಯಾಗಿದೆ.

ಆನಂದ್ ಶರ್ಮಾ (ಹಿಮಾಚಲ ಪ್ರದೇಶ), ರಾಣಿ ನಾರಾಹ್, ರಿಪುನ್ ಬೋರಾ (ಅಸ್ಸಾಂ), ಎಕೆ ಆಂಟನಿ, ಎಂವಿ ಶ್ರೇಯಮ್ಸ್ ಕುಮಾರ್, ಕೆ.ಸೋಮಪ್ರಸಾದ್ (ಕೇರಳ), ಕೆ.ಜಿ. ಕೆನ್ಯೆ (ನಾಗಾಲ್ಯಾಂಡ್), ಜರ್ನಾ ದಾಸ್ (ತ್ರಿಪುರ), ಸುಖದೇವ್ ಸಿಂಗ್, ಪ್ರತಾಪ್ ಸಿಂಗ್ ಬಾಜ್ವಾ, ಶ್ವೈತ್ ಮಲಿಕ್, ನರೇಶ್ ಗುಜ್ರಾಲ್ ಮತ್ತು ಶಂಶೇರ್ ಸಿಂಗ್ ಡುಲ್ಲೋ (ಪಂಜಾಬ್) ಅವರ ಅವಧಿ ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ.

ಮಾರ್ಚ್ 14ರಂದು ಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ. ಅದೇ ದಿನದಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ನಾಮಪತ್ರಗಳನ್ನು ಸ್ವೀಕರಿಸಲು ಮಾರ್ಚ್ 21 ಕೊನೆಯ ದಿನಾಂಕವಾಗಿದೆ. 22ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 24 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ. ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. ಸಂಜೆಯ ನಂತರ ಫಲಿತಾಂಶ ಹೊರಬೀಳಲಿದೆ.

Follow Us on : Google News | Facebook | Twitter | YouTube