Welcome To Kannada News Today

ಸಬರಮತಿ ಜೈಲಿನ 11 ಕೈದಿಗಳೂ ಸೇರಿ, ಮೂವರು ಸಿಬ್ಬಂದಿಗೆ ಕೊರೋನಾ

ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಜೈಲಿನ 11 ಕೈದಿಗಳಿಗೆ ಮತ್ತು ಮೂವರು ಜೈಲು ಸಿಬ್ಬಂದಿಗೆ ಕೊವಿಡ್-19 ದೃಢಪಟ್ಟಿದೆ.

🌐 Kannada News :

ಆದಾಗ್ಯೂ, 11 ಕೈದಿಗಳಲ್ಲಿ ಯಾರೊಬ್ಬರೂ, ಅಪರಾಧಿಗಳನ್ನು ಒಳಗೊಂಡಂತೆ ಇತರ ಸುಮಾರು 2500 ಕೈದಿಗಳೊಂದಿಗೆ ಸಂಪರ್ಕಕ್ಕೆ ಬಂದಿಲ್ಲ, ಅವರು ಈಗಾಗಲೇ ಪ್ರತ್ಯೇಕವಾಗಿದ್ದರು ಎಂದು ಸಬರಮತಿ ಜೈಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ.ವಿ.ರಾಣಾ ತಿಳಿಸಿದ್ದಾರೆ.

ಹೊಸದಾಗಿ ಇಬ್ಬರು ಹವಾಲ್ದಾರ್ ಗಳು ಮತ್ತು ಜೈಲು ಸಹಾಯಕ(ಪೇದೆ) ಸೇರಿದಂತೆ ಮೂವರಿಗೆ ಕೊರೋನಾ ವೈರಸ್ ತಗುಲಿದೆ. ಕಳೆದ ವಾರ ಇಬ್ಬರು ಕೈದಿಗೆಳಿಗೆ ಪಾಸಿಟಿವ್ ಬಂದಿತ್ತು ಎಂದು ರಾಣಾ ಹೇಳಿದ್ದಾರೆ.

ಒಂದು ಪ್ರಕರಣದಲ್ಲಿ ಬಂಧನದ ನಂತರ ಜೈಲಿಗೆ ಕಳುಹಿಸಲಾದ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ರಾಣಾ ಹೇಳಿದರು.

“ಕಳೆದ ಕೆಲವು ದಿನಗಳಲ್ಲಿ, ತಮ್ಮ ಪೆರೋಲ್ ಮುಗಿಸಿ ಜೈಲಿಗೆ ಮರಳಿದ ಐವರು ಅಪರಾಧಿಗಳಿಗೆ ಸಹ ಸೋಂಕು ದೃಢಪಟ್ಟಿದ್ದು. ಒಟ್ಟಾರೆಯಾಗಿ, 11 ಕೈದಿಗಳಿಗೆ ಸೋಂಕು ದೃಢಪಟ್ಟಿದೆ, ಅದೃಷ್ಟವಶಾತ್, ಅವರಲ್ಲಿ ಯಾರೊಬ್ಬರೂ ಇತರರೊಂದಿಗೆ ಸಂಪರ್ಕಕ್ಕೆ ಬರಲಿಲ್ಲ” ಎಂದು ರಾಣಾ ಹೇಳಿದರು.

ಈ ಮೂಲಕ, ಇತ್ತೀಚಿಗೆ ಪೆರೋಲ್ ಮುಗಿಸಿ ಜೈಲಿಗೆ ಮರಳಿದ ಐವರು ಅಪರಾಧಿಗಳಿಗೆ ಕೊರೋನಾ ಪಾಸಿಟಿವ್ ದೃಢುಪಟ್ಟಿದ್ದು, ಇದುವರೆ ಒಟ್ಟು 11 ಕೈದಿಗಳಿದೆ ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile