ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಒಂದೇ ಸಮವಸ್ತ್ರ !

ಲಿಂಗ ತಾರತಮ್ಯ ತೊಲಗಿಸಲು ಕೇರಳ ಸರ್ಕಾರ ವಿನೂತನ ನಿರ್ಧಾರ ಕೈಗೊಂಡಿದೆ. ಶಾಲಾ ಹಂತದಿಂದ ವಿದ್ಯಾರ್ಥಿಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಸಾರ್ವಜನಿಕ ಶಾಲೆಯು ಹುಡುಗರು ಮತ್ತು ಹುಡುಗಿಯರಿಗೆ ಏಕರೂಪದ ಸಮವಸ್ತ್ರವನ್ನು ಜಾರಿಗೊಳಿಸುತ್ತಿದೆ. 

ಕೊಚ್ಚಿ: ಲಿಂಗ ತಾರತಮ್ಯ ತೊಲಗಿಸಲು ಕೇರಳ ಸರ್ಕಾರ ವಿನೂತನ ನಿರ್ಧಾರ ಕೈಗೊಂಡಿದೆ. ಶಾಲಾ ಹಂತದಿಂದ ವಿದ್ಯಾರ್ಥಿಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಸಾರ್ವಜನಿಕ ಶಾಲೆಯು ( School ) ಹುಡುಗರು ಮತ್ತು ಹುಡುಗಿಯರಿಗೆ ಏಕರೂಪದ ಸಮವಸ್ತ್ರವನ್ನು ಜಾರಿಗೊಳಿಸುತ್ತಿದೆ.

ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ಬಳಿಯ ವಲಯಚಿರಂಗರ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ 754 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಹುಡುಗಿಯರು ಮತ್ತು ಹುಡುಗರು ಎಂಬ ಭೇದವಿಲ್ಲದೆ ಎಲ್ಲರೂ 3/4 ಶಾರ್ಟ್ಸ್ ಮತ್ತು ಶರ್ಟ್ ಧರಿಸಿ ಶಾಲೆಗೆ ಬರುತ್ತಾರೆ.

2018ಕ್ಕೆ ಏಕರೂಪ ಸಂಹಿತೆ ಜಾರಿಯಾಗಿದ್ದರೂ ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತಿದೆ. ಲಿಂಗ ಸಮಾನತೆಗೆ ಸರ್ಕಾರದ ಬದ್ಧತೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಹೇಳಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today