ಬಿಜೆಪಿ ಶಾಸಕ ನಿಧನ: ನಿದ್ದೆಯಲ್ಲಿಯೇ ನಿಧನರಾದ ಬಿಜೆಪಿಯ ಹಿರಿಯ ಶಾಸಕರಿಗೆ ಮೋದಿ ಸಂತಾಪ

ಬಿಜೆಪಿ ಶಾಸಕ ನಿಧನ: ಉತ್ತರಾಖಂಡದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಶಾಸಕ ಹರ್ಬನ್ಸ್ ಕಪೂರ್ (76) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. 

ಬಿಜೆಪಿ ಶಾಸಕ ನಿಧನ: ಉತ್ತರಾಖಂಡದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಶಾಸಕ ಹರ್ಬನ್ಸ್ ಕಪೂರ್ (76) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ಡೆಹ್ರಾಡೂನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹರ್ಬನ್ಸ್ ಕಪೂರ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಹರ್ಬನ್ಸ್ ನಿಧನಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ರಾಜ್ಯ ಬಿಜೆಪಿ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ. ಹರ್ಬನ್ಸ್ ಕಪೂರ್ ಸಾವಿನ ಸುದ್ದಿ ತಿಳಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಅವರ ಮನೆಗೆ ತೆರಳಿದ್ದರು. ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಹರ್ಬನ್ಸ್ ನಿಧನಕ್ಕೆ ರಾಜ್ಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

ಹರ್ಬನ್ಸ್ ಸಾವಿಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಸೋಮವಾರ ಟ್ವೀಟ್ ಮಾಡಿರುವ ಮೋದಿ, ಉತ್ತರಾಖಂಡದ ಬಿಜೆಪಿ ಹಿರಿಯ ನಾಯಕ ಹರ್ಬನ್ಸ್ ಅವರ ಸಾವು ದುಃಖಕರವಾಗಿದೆ. ಸಾರ್ವಜನಿಕ ಸೇವೆ ಮತ್ತು ಸಮಾಜ ಕಲ್ಯಾಣಕ್ಕೆ ಅವರು ನೀಡಿದ ಕೊಡುಗೆಯನ್ನು ಜನರು ಎಂದಿಗೂ ಮರೆಯುವುದಿಲ್ಲ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪಗಳು.” ಎಂದಿದ್ದಾರೆ.

ಹರ್ಬನ್ಸ್ ಕಪೂರ್ 1946 ರಲ್ಲಿ ಪಾಕಿಸ್ತಾನದ ಇಂದಿನ ಖೈಬರ್ ಪಖ್ತುಂಕ್ವಾದಲ್ಲಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಆದಾಗ್ಯೂ, ವಿಭಜನೆಯ ನಂತರ, ಅವರ ಕುಟುಂಬವು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನೆಲೆಸಿತು.

ಹರ್ಬನ್ಸ್ ಸತತ ಎಂಟು ಬಾರಿ ಶಾಸಕರಾಗಿ ಗೆದ್ದಿದ್ದಾರೆ. 2007 ರಿಂದ 2012 ರವರೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದಿಂದ ಉತ್ತರಾಖಂಡವನ್ನು ಬೇರ್ಪಡಿಸುವ ಮೊದಲು, ಅವರು ಜುಲೈ 1991 ರಿಂದ ಡಿಸೆಂಬರ್ 1992 ರವರೆಗೆ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದರು. 2001-2002ರವರೆಗೆ ಉತ್ತರಾಖಂಡದ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today