ಅಸ್ಸಾಂ ಎಟಿಎಂ ಲೂಟಿ ಪ್ರಕರಣ : 7 ಜನರ ಬಂಧನ

Seven arrested for looting ATM in Assam

ಕನ್ನಡ ನ್ಯೂಸ್ ಟುಡೇ

ಅಸ್ಸಾಂ : ಎಟಿಎಂ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ನಂತರ ಪೊಲೀಸರು ಆರೋಪಿಗಳಿಗಾಗಿ ಬಲೇ ಬೀಸಿದ್ದರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪೊಲೀಸರು ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯು ಜನವರಿ 20 ರಂದು ನಡೆದಿತ್ತು, ಸಧ್ಯ ಪೊಲೀಸರು ರೂ 19 ಲಕ್ಷ, ಗ್ಯಾಸ್ ಕಟ್ಟರ್ ಮತ್ತು ಇತರ ಉಪಕರಣಗಳನ್ನು ಮತ್ತು ಅಪರಾಧಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ದಕ್ಷಿಣ ಸಲ್ಮಾರಾ ಜಿಲ್ಲೆ ಮತ್ತು ಧುಬ್ರಿ ಪಟ್ಟಣದವರು ಎಂದು ತಿಳಿದು ಬಂದಿದೆ.. “ಉಳಿದ ಲೂಟಿ ಮಾಡಿದ ಹಣವನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ, ಎಂದು ತಿಳಿದುಬಂದಿದೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಜನರು ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.////