Welcome To Kannada News Today

ಉತ್ತರ ಪ್ರದೇಶದಲ್ಲಿ 7 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ

seven-year-old girl was abused by a neighbour

🌐 Kannada News :

ಕನ್ನಡ ನ್ಯೂಸ್ ಟುಡೇIndia News

ಅಂಬೇಡ್ಕರ್ ನಗರ ( ಉತ್ತರ ಪ್ರದೇಶ ) : ಅತ್ಯಾಚಾರಿಗಳಿಗೆ ಕಾನೂನಿನ ಭಯ ಇಲ್ಲವೇ ಇಲ್ಲ , ಅನ್ಯ ದೇಶಗಳಲ್ಲಿ ವಿಧಿಸುವ ಭಯಂಕರ ಶಿಕ್ಷೆಯ ಪ್ರಮಾಣವನ್ನು ವಿದಿಸಿದಾಗ ಮಾತ್ರ ಇಂತಹ ಪ್ರಕರಣಗಳು ಕೊನೆಗೊಳ್ಳುತ್ತವೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಘಟನೆ ವರದಿಯಾಗಿದೆ.

ಫೆಬ್ರವರಿ 10 ರಂದು ಏಳು ವರ್ಷದ ಬಾಲಕಿಯೊಬ್ಬಳು ನೆರೆಯ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ. ಜಿಲ್ಲೆಯ ಅಕ್ಬರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಿರಾನ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

“ಅಮನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ಏಳು ವರ್ಷದ ಬಾಲಕಿಯನ್ನು ತನ್ನ ಮನೆಯ ಸಮೀಪವಿರುವ ಜಮೀನೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಆಘಾತಕ್ಕೊಳಗಾದ ಹುಡುಗಿ ತನ್ನ ಮನೆಗೆ ಹಿಂದಿರುಗಿ ತನ್ನ ಕುಟುಂಬ ಸದಸ್ಯರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಅವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ನಂತರ ಪೊಲೀಸರಿಗೆದೂರುನೀಡಿದ್ದಾರೆ.

“ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವನಿಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.

Web Title : seven-year-old girl was abused by a neighbour
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.


 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile