Welcome To Kannada News Today

ಎಣ್ಣೆ ಪ್ರಿಯರಿಗೆ ಮತ್ತೊಮ್ಮೆ ಶಾಕ್, ಮೇ 15ರ ವರೆಗೆ ಬಾರ್ ಓಪನ್ ಆಗೋದು ಡೌಟ್

Shocking news for drunkeners, no liquor sale until May 15

🌐 Kannada News :

ಬೆಂಗಳೂರು : ಮಾಯಾಮಾರಿ ಕೊರೋನಾ ವೈರಸ್ ತಡೆಯಲು ದೇಶದಾದ್ಯಂತ ವಿಧಿಸಲಾಗಿದ್ದ 2ನೇ ಹಂತದ ಲಾಕ್​ಡೌನ್ ಮೇ 3ಕ್ಕೆ ಅಂತ್ಯವಾಗಲಿದೆ. ಹೀಗಾಗಿ ನೆನ್ನೆಯ ದಿನ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂವಾದ ನಡೆಸಿದ್ದಾರೆ. ಪ್ರಧಾನಿ ಜೊತೆಗಿನ ವಿಡಿಯೋ ಸಂವಾದದ ವೇಳೆ ರಾಜ್ಯದ ಅಭಿಪ್ರಾಯ ಹೇಳಿರುವ ಸಿಎಂ ಯಡಿಯೂರಪ್ಪನವರು ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಿ ಜೊತೆ ವಿಡಿಯೋ ಸಂವಾದದ ವೇಳೆ ಯಡಿಯೂರಪ್ಪನವರು ಕೊರೋನಾ ಬಿಕ್ಕಟ್ಟಿನ ಈ ಸಮಯದಲ್ಲಿ ಮೇ 15ರವರೆಗೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ವರದಿ ಯಾಗಿದೆ. ಹೀಗಾಗಿ ಮೇ 15ರವರೆಗೆ ಎಣ್ಣೆ ಪ್ರಿಯರು ಕಾಯಲೇ ಬೇಕು, ಈ ನಡುವೆ ಯಾವುದೇ ಬೆಳವಣಿಗೆಯಲ್ಲಿ ಮದ್ಯ ಸಿಗುವುದು ಬಹುತೇಕ ಡೌಟ್.

ಹೌದು,  ರಾಜ್ಯಗಳ ಅಭಿಪ್ರಾಯ ಸಲ್ಲಿಕೆ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ ಮೇ 15ರವರೆಗೆ ಲಾಕ್​ಡೌನ್ ಮುಂದುವರಿಸಲು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಸಹಮತ ಸೂಚಿಸಿದೆ.

ಈನಡುವೆ, ಈ ಬಗ್ಗೆ ಪ್ರತಿಕ್ರಿಯಿಸಿರುವ, ಅಬಕಾರಿ ಸಚಿವ ಮುಖ್ಯಮಂತ್ರಿಗಳ ಅಭಿಪ್ರಾಯವನ್ನೇ ಸಹಮತಿಸಿದ್ದಾರೆ. ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಬಕಾರಿ ಸಚಿವ ಹೆಚ್.ನಾಗೇಶ್  ಮೇ 3ರ ಬಳಿಕ ಗ್ರೀನ್‌ಜೋನ್‌ನಲ್ಲಿ ಮದ್ಯ ಮಾರಾಟಕ್ಕೆ ಸಿಎಂ ಬಳಿ ಮನವಿ ಮಾಡಿದ್ದೇನೆ. ಆದ್ರೆ ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಕೋಲಾರದಲ್ಲಿ ಪ್ರತಿಕ್ರಿಯಿಸಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile