Kannada News - Kannadigas Adda

Welcome To Kannada News - Kannadigas Adda

ಶಾಕಿಂಗ್, ಚುನಾವಣಾ ಆಯೋಗದ ಬೇಟೆಗೆ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ ?

Shocking, You know how many crores election commission seized ?

Kannadanews.today - ಕನ್ನಡಿಗಾಸ್ ಅಡ್ಡ

ಶಾಕಿಂಗ್, ಚುನಾವಣಾ ಆಯೋಗದ ಬೇಟೆಗೆ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ ?

ಚುನಾವಣೆ ಹಿನ್ನೆಲೆಯಲ್ಲಿ ನಡೆದ ಚುನಾವಣಾ ಆಯೋಗದ ಭರ್ಜರಿ ಭೇಟೆ ಕೇಳಿದ್ರೆ ಒಂದು ಸಲ ಶಾಕ್ ಆಗ್ತೀರಾ ! ಹೌದು ದೇಶದಾಧ್ಯಂತ ಇಲ್ಲಿಯವರೆಗೂ ಚುನಾವಣಾ ಆಯೋಗ ವಶ ಪಡಿಸಿಕೊಂಡಿರುವ ಮೊತ್ತ ಬರೋಬ್ಬರಿ 377 ಕೋಟಿ.

ಹಬ್ಬಾ, ಇಷ್ಟೊಂದಾ ಅಂತ ನಾವು ನೀವೆಲ್ಲ ಒಂದು ಸಲ ಉಬ್ಬೇರಿಸುವುದಂತೂ ಸತ್ಯ. ವಶ ಪಡಿಸಿಕೊಂಡಿರುವ 377 ಕೋಟಿಯಲ್ಲಿ, 157 ಕೋಟಿಗೂ ಹೆಚ್ಚಿನ ಮೌಲ್ಯದ ಮದ್ಯವೂ ಸೇರಿದೆ.

ಜೊತೆಗೆ ಬರೋಬ್ಬರಿ 705 ಕೋಟಿ ಬೆಲೆ ಬಾಳುವ ಮಾದಕ ವಸ್ತುಗಳನ್ನೂ ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವೆಲ್ಲದರ ಜೊತೆಗೆ ಚುನಾವಣಾ ಹಿನ್ನೆಲೆ ಹಂಚಲು ಸಂಗ್ರಹಿಸಿದ್ದ ಬೆಲೆ ಬಾಳುವ ವಸ್ತುಗಳ ಮೌಲ್ಯ 312 ಕೋಟಿ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದ ಚುನಾವಣಾ ಅಧಿಕಾರಿಗಳು ಇದು ವರೆಗೂ ಕೋಟಿ ಕೋಟಿ ಬೆಲೆಬಾಳುವ ವಸ್ತು ಮತ್ತು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇವುಗಳಲ್ಲಿ , ಸೀರೆ, ಕಿವಿ ಓಲೆ, ಬೆಳ್ಳಿಯ ಸಾಮಗ್ರಿಗಳೂ ಸೇರಿ ಹಲವು ವಸ್ತುಗಳೂ ಸಹ ಸೇರಿವೆ. ಚುನಾವಣಾ ಆಯೋಗದಿಂದ ವಶ ಪಡಿಸಿಕೊಳ್ಳಲಾದ ಒಟ್ಟು ಮೊತ್ತದ ಲೆಕ್ಕಾಚಾರ ಆಕುವುದಾದರೆ ಸಾವಿರಾರು ಕೋಟಿ ದಾಟುತ್ತದೆ. ಇವುಗಳು ಅನಧಿಕೃತವಾಗಿ ಸಂಗ್ರಹಿಸಿದ್ದ ಹಾಗೂ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಮೊತ್ತ ಹಾಗೂ ವಸ್ತುಗಳಾಗಿವೆ.////

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.