ಕೊರೋನ ಎಫೆಕ್ಟ್ : ನಿರ್ದಯವಾಗಿ ಯುವಕರನ್ನು ಥಳಿಸಿದ ಎಸ್ಐ ಅಮಾನತು
SI suspended for thrashing youngsters during lockdown
ಕಡಪ : ಅಧಿಕಾರವನ್ನು ಬಹಿರಂಗವಾಗಿ ಪ್ರದರ್ಶಿಸುತ್ತಾ, ಕಡಪ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರ ಪ್ರಸಾದ್, ರಾಜ್ಯದಲ್ಲಿ ಲಾಕ್ಡೌನ್ ಸಮಯದಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡುವ ಯುವಕರನ್ನು ಥಳಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಆತನ (ಯುವಕನನ್ನು ಹೊಡೆಯುವ) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಕಡಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೆ.ಎನ್.ಅಂಬುರಾಜನ್ ಅವರು ಸಬ್ ಇನ್ಸ್ಪೆಕ್ಟರ್ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ಧಿಕ್ಕರಿಸಿದ ಕಾರಣಕ್ಕಾಗಿ ಪೊಲೀಸ್ ಅಧಿಕಾರಿ ವರ ಪ್ರಸಾದ್ ಅನೇಕ ಜನರನ್ನು ನಿಂದಿಸಿದ್ದಾರೆ ಮತ್ತು ಯುವಕನನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಪರ್ಯಾಸವೆಂದರೆ, ಎಸ್ಐ ಥಳಿಸುವುದನ್ನು ಅವರ ಸಿಬ್ಬಂದಿಯ ಕೆಲವು ಪೊಲೀಸ್ ಸಿಬ್ಬಂದಿ ವಿಡಿಯೋ ಮಾಡಿದ್ದಾರೆ.
ಅಮಾನತ್ತು ಮಾಡಲು ಮುಖ್ಯ ಕಾರಣ, ವೀಡಿಯೊಗಳಲ್ಲಿ, ವರ ಪ್ರಸಾದ್ ಸಿನೆಮಾಗಳಲ್ಲಿ ಪೋಲೀಸ್ನಂತೆ ಲಾಠಿ ತಿರುಗಿಸಿ, ಯುವಕರನ್ನು ಥಳಿಸಿ ಲಾಠಿಯಿಂದ ಹೊಡೆಯುವುದನ್ನು ಕಾಣಬಹುದು. ಹಾಗೂ ವಿಡಿಯೋಗಳಿಗೆ ಫೋಸ್ ಕೊಡಲೆಂದೇ ಒಡೆಯುವಂತೆ ಕಾಣುತ್ತದೆ, ಈ ವೇಳೆ ಪೊಲೀಸ್ ಅಧಿಕಾರಿಯ ದುರಹಂಕಾರ ಮತ್ತು ಹಿಂಸಾತ್ಮಕ ವರ್ತನೆಯಿಂದಾಗಿ ನೆಟಿಜನ್ಗಳು ಟೀಕಿಸಿದ್ದರು.
Web Title : SI suspended for thrashing youngsters during lockdown