ಮಕ್ಕಳ ರಕ್ಷಣೆಗಾಗಿ ಸ್ಮಾರ್ಟ್ ಸ್ಕೂಲ್ ಬ್ಯಾಗ್

ಚೀನಾದ ಹುವಾವೆ ಕಂಪನಿ ಸ್ಮಾರ್ಟ್ ಸ್ಕೂಲ್ ಬ್ಯಾಗ್ ತಯಾರಿಸಿದೆ

Online News Today Team

ನವದೆಹಲಿ : ಅನೇಕ ಪೋಷಕರು ತಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವವರೆಗೆ ಚಿಂತಿತರಾಗಿರುತ್ತಾರೆ.. ಅಂಥವರಿಗಾಗಿಯೇ ಚೀನಾದ ಹುವಾವೆ ಕಂಪನಿ ಸ್ಮಾರ್ಟ್ ಸ್ಕೂಲ್ ಬ್ಯಾಗ್ ತಯಾರಿಸಿದೆ. ಇದು ಯಾವಾಗಲೂ ಮಕ್ಕಳ ಸ್ಥಳವನ್ನು ನಿಮಗೆ ತಿಳಿಸುತ್ತದೆ. ಇದು ಜಿಪಿಎಸ್ ಮಾತ್ರವಲ್ಲದೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಸ್ಮಾರ್ಟ್ ಲೈಫ್ ಎಂಬ ಆಪ್ ಮೂಲಕ ಪೋಷಕರು ತಮ್ಮ ಮಕ್ಕಳ ಚಲನವಲನಗಳನ್ನು ಕಾಲಕಾಲಕ್ಕೆ ವೀಕ್ಷಿಸಬಹುದು.

ಮಕ್ಕಳು ದಾರಿ ತಪ್ಪಿ, ಕಾಣೆಯಾಗಲು ಸಾಧ್ಯವಿಲ್ಲ, ನಿಮ್ಮ ಮಕ್ಕಳು ಎಲ್ಲಿದ್ದಾರೆ ಯಾವ ಸ್ಥಳದಲ್ಲಿದ್ದಾರೆ ಎಂದು ಆಪ್ ಮೂಲಕ ತಿಳಿಯಬಹುದು. ಇದರಿಂದ ಮಕ್ಕಳು ಕಾಣೆಯಾಗುವ ಪರಿಸ್ಥಿತಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

Follow Us on : Google News | Facebook | Twitter | YouTube