ಶಾಲೆಗಳನ್ನು ತೆರೆಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

social media Campaign to open schools : ಅಭಿಯಾನದ ನಡುವೆ, ಶೇಕಡಾ 71 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ

ಹಲವರು ಶಾಲೆಗಳನ್ನು ತೆರೆಯಲು ಬೆಂಬಲ ನೀಡುತ್ತಿದ್ದಾರೆ. ಶಾಲೆಗಳು ಇನ್ನೂ ತೆರೆದಿಲ್ಲದ ಕಾರಣ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಸಮಸ್ಯೆಗಳನ್ನು ವಿವರಿಸುವುದರ ಜೊತೆಗೆ ಅಭಿಯಾನ ಶುರುಮಾಡಿದ್ದಾರೆ, ಶಾಲೆಗಳನ್ನು ತೆರೆಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಕ್ಕಿಳಿದಿದ್ದಾರೆ.

ಶಾಲೆಗಳನ್ನು ತೆರೆಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

  • ಶೇಕಡಾ 71 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ.
  • ಶಾಲೆಗಳು ಇನ್ನೂ ತೆರೆದಿಲ್ಲದ ಕಾರಣ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಸಮಸ್ಯೆ.
  • ಶಾಲೆಗಳನ್ನು ತೆರೆಯುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ

( Kannada News Today ) : ನವದೆಹಲಿ : ಇಂದಿನಿಂದ (ಅಕ್ಟೋಬರ್ 15) ಶಾಲೆಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.

ಬಿಹಾರ, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳು ಇಂದಿನಿಂದ ಶಾಲೆಗಳನ್ನು ತೆರೆಯುತ್ತಿದ್ದರೆ, ಕೆಲವು ರಾಜ್ಯಗಳು ಪ್ರಸ್ತುತ ಶಾಲೆಗಳನ್ನು ತೆರೆಯಲು ಸಿದ್ಧವಾಗಿಲ್ಲ. ಏತನ್ಮಧ್ಯೆ, ಶಾಲೆಗಳನ್ನು ತೆರೆಯಲು ಟ್ವಿಟ್ಟರ್ ನ ಲ್ಲಿ ಅಭಿಯಾನ ಶುರುವಾಗಿದೆ.

ಅವರಲ್ಲಿ ಹಲವರು ಶಾಲೆಗಳನ್ನು ತೆರೆಯಲು ಬೆಂಬಲ ನೀಡುತ್ತಿದ್ದಾರೆ. ಶಾಲೆಗಳು ಇನ್ನೂ ತೆರೆದಿಲ್ಲದ ಕಾರಣ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಸಮಸ್ಯೆಗಳನ್ನು ವಿವರಿಸುವುದರ ಜೊತೆಗೆ ಅಭಿಯಾನ ಶುರುಮಾಡಿದ್ದಾರೆ..

ಇದನ್ನೂ ಓದಿ : ರಜನಿಕಾಂತ್ ಮೇಲೆ ಮದ್ರಾಸ್ ಹೈಕೋರ್ಟ್ ಆಕ್ರೋಶ

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವುದು ವ್ಯರ್ಥ ಪ್ರಯತ್ನ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಪರೀಕ್ಷೆ ನಡೆಸಿದಾಗ ಪೋಷಕರು ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಎಂದು ಆರೋಪಿಸಲಾಗಿದೆ.

ಮತ್ತೊಂದೆಡೆ ವಿದ್ಯಾರ್ಥಿಗಳು ಸಾಕಷ್ಟು ಸೋಮಾರಿಗಳಾಗುತ್ತಿದ್ದಾರೆ ಮತ್ತು ತೂಕ ಹೆಚ್ಚಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇತರರು ಶಾಲೆಗಳನ್ನು ತೆರೆದರೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದಾರೆ.

ಇನ್ನೂ ಕೆಲವರು ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ, ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡಬಹುದು ಮತ್ತು ಮಕ್ಕಳನ್ನು ಕರೊನಾ ಸೋಂಕಿನಿಂದ ರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, ಶೇಕಡಾ 71 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ.

Scroll Down To More News Today