ತಂದೆಯನ್ನು ಕೊಂದು ತುಂಡುಗಳಾಗಿ ಕತ್ತರಿಸಿದ ಮಗ

son killed his father and cut him to pieces

ತಂದೆಯನ್ನು ಕೊಂದು ತುಂಡುಗಳಾಗಿ ಕತ್ತರಿಸಿದ ಮಗ – son killed his father and cut him to pieces

ತಂದೆಯನ್ನು ಕೊಂದು ತುಂಡುಗಳಾಗಿ ಕತ್ತರಿಸಿದ ಮಗ

ಕನ್ನಡ ನ್ಯೂಸ್ ಟುಡೇ : ನಮ್ಮ ನೆರೆಯ ರಾಜ್ಯದಲ್ಲಿ, ತಂದೆಯನ್ನೇ ಕೊಂದು, ಮೃತದೇಹವನ್ನು ತುಂಡುಗಳನ್ನಾಗಿ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ದುಷ್ಟ ಮಗನೊಬ್ಬ ಹೈದರಾಬಾದ್‌ನ ಮಲ್ಕಾಜ್‌ಗಿರಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ತನ್ನ ತಂದೆಯನ್ನೇ ಕೊಂದಿದ್ದಾನೆ,  ನಂತರ ಅವನು ದೇಹವನ್ನು ತುಂಡುಗಳಾಗಿ ಕತ್ತರಿಸಿ ಅದೇ ಮನೆಯಲ್ಲಿಯೇ ಬಕೆಟ್‌ಗಳಲ್ಲಿ ಮುಚ್ಚಿಟ್ಟಿದ್ದನು. ಮೂರು ದಿನಗಳ ನಂತರ ವಾಸನೆಯನ್ನು ಗುರುತಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಘಟನೆ  ಬಂದಿದೆ, ಮೃತದೇಹವನ್ನು ಬಕೆಟ್ ಗಳಲ್ಲಿ ತುಂಡರಿಸಿ ಇಡಲಾಗಿತ್ತು, ಆರೋಪಿ ಮಗನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮಲ್ಕಾಜ್ ಗಿರಿ ಪೊಲಿಸ್ಟೇಷನ್ ಮೌಲಾಲಿ ಆರ್‌ಟಿಸಿ ಕಾಲೋನಿಯಲ್ಲಿ ನಡೆದ ಘಟನೆ ಸ್ಥಳೀಯವಾಗಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿಯನ್ನು ಸುತಾರ್ ಕಿಶನ್ ಮಾರುತಿ ಎನ್ನಲಾಗಿದೆ, ಅವರು ನಿವೃತ್ತ ರೈಲ್ವೆ ಉದ್ಯೋಗಿ ಎಂದು ಗುರುತಿಸಲಾಗಿದೆ////