ಸ್ಥಗಿತಗೊಳ್ಳಲಿದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಕಾರ್ಡ್‌

State Bank of India Plans to Eliminate Debit Cards

ಸ್ಥಗಿತಗೊಳ್ಳಲಿದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಕಾರ್ಡ್‌ – State Bank of India Plans to Eliminate Debit Cards

ಸ್ಥಗಿತಗೊಳ್ಳಲಿದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಕಾರ್ಡ್‌

ಕನ್ನಡ ನ್ಯೂಸ್ ಟುಡೇ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಡೆಬಿಟ್ ಕಾರ್ಡ್‌ಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ. ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಮಾತನಾಡಿ, “ಡೆಬಿಟ್ ಕಾರ್ಡ್‌ಗಳನ್ನು ಸ್ಥಗಿತಗೊಳಿಸುವುದು ನಮ್ಮ ಆಶಯ, ಅದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕಿಂಗ್ ವ್ಯವಸ್ಥೆಯಿಂದ ಡೆಬಿಟ್ ಕಾರ್ಡ್ಗಳ ಬಳಕೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ, ಈ ಬಗ್ಗೆ ಅದಾಗಲೇ ಎಸ್ ಬಿ ಐ ಯೋಜಿಸುತ್ತಿದೆ. ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಕೈಗಾರಿಕಾ ಸಂಸ್ಥೆ ಫೆಡರೇಶನ್ ಆಯೋಜಿಸಿದ ಬ್ಯಾಂಕಿಂಗ್ ಸಮಾವೇಶದ ವಾರ್ಷಿಕ ಸಭೆಯಲ್ಲಿ ಬ್ಯಾಂಕ್ ಈ ಮಾಹಿತಿ ಬಿಚ್ಚಿಟ್ಟಿದೆ.

ಹೌದು, ಹೆಚ್ಚಿನ ಡಿಜಿಟಲ್ ಪಾವತಿ ಪರಿಹಾರಗಳನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಕಾರ್ಡ್‌ಗಳನ್ನು ತೆಗೆದುಹಾಕಲು ಎಸ್‌ಬಿಐ ಯೋಜಿಸಿದೆ. 3 ಕೋಟಿ ಕ್ರೆಡಿಟ್ ಕಾರ್ಡ್‌ಗಳಿಗೆ ಹೋಲಿಸಿದರೆ ದೇಶದಲ್ಲಿ ಸುಮಾರು 90 ಕೋಟಿ ಡೆಬಿಟ್ ಕಾರ್ಡ್‌ಗಳಿವೆ ಎಂದು ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ. 

ಡೆಬಿಟ್ ಕಾರ್ಡ್ ಕಡಿಮೆ ಇರುವ ದೇಶವನ್ನಾಗಿಸಲು, ಬ್ಯಾಂಕಿನ ಸ್ವಂತ ‘ಯೋನೊ’ ಪ್ಲಾಟ್‌ಫಾರ್ಮ್‌ನಂತಹ ಡಿಜಿಟಲ್ ಪರಿಹಾರಗಳಿವೆ ಎಂದು ಅವರು ಹೇಳಿದ್ದಾರೆ. ಯೋನೊ ಪ್ಲಾಟ್‌ಫಾರ್ಮ್‌ನ ಸಹಾಯದಿಂದ, ಗ್ರಾಹಕರು ಸ್ವಯಂಚಾಲಿತ ಟೆಲ್ಲರ್ ಯಂತ್ರಗಳಲ್ಲಿ ಹಣವನ್ನು ಹಿಂಪಡೆಯಬಹುದು ಅಥವಾ ಯಾವುದೇ ಕಾರ್ಡ್‌ ಇಲ್ಲದೆ ವ್ಯಾಪಾರಿ ಸಂಸ್ಥೆಯಲ್ಲಿ ಖರೀದಿಗೆ ಪಾವತಿಸಬಹುದು ಎಂದು ರಜನೀಶ್ ಕುಮಾರ್ ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಪ್ಲಾಸ್ಟಿಕ್ ಕಾರ್ಡ್‌ಗಳ ಬಳಕೆ ಕಡಿಮೆ ಆಗಲಿದೆ ಎಂದು ಹೇಳಿದ ಅವರು. ಪ್ರಸ್ತುತ, ಕ್ಯೂಆರ್ ಕೋಡ್ ಇದೆ, ಇದು ಪಾವತಿಗಳನ್ನು ಮಾಡಬಹುದಾದ ಅಗ್ಗದ ಮಾರ್ಗವಾಗಿದೆ ಎಂದಿದ್ದಾರೆ.////

Web Title : State Bank of India Plans to Eliminate Debit Cards