Welcome To Kannada News Today

ಸರ್ಕಾರಿ ನೌಕರರಿಗೆ ಕಹಿ ಸುದ್ದಿ, ನೌಕರರ ಗಳಿಕೆ ರಜೆ ರದ್ದು

ಸರ್ಕಾರಿ ನೌಕರರ ಗಳಿಕೆ ರಜೆಯನ್ನು ಸಂಬಳವಾಗಿ ಪಡೆಯಲು ಇರುವ ಅವಕಾಶ ರದ್ದುಗೊಳಿಸಿ ಆದೇಶಿಸಿದೆ.

🌐 Kannada News :

ನೌಕರರ ಗಳಿಕೆ ರಜೆ ರದ್ದು : ಈ ಮುಂಚೆ ಸರ್ಕಾರಿ ನೌಕರರು ತಮ್ಮ ರಜೆಗಳನ್ನು ಉಪಯೋಗಿಸಲಿಲ್ಲ ಅಂದರೆ ಅದರ ಹಣವನ್ನು ಪಡೆಯುತ್ತಿದ್ದರು. ಆದರೆ ಸದ್ಯ ಇದಕ್ಕೆ ಕತ್ತರಿ ಬಿದ್ದಿದ್ದು, ಸರ್ಕಾರದಿಂದ ಹೊಸ ಆದೇಶ ಹೊರಬಿದ್ದಿದೆ. ಅದರಂತೆ ಇನ್ನುಮುಂದೆ ಯಾವುದೇ ಸರ್ಕಾರಿ ನೌಕರರು ತಮ್ಮ ರಜೆಯನ್ನು ಉಪಯೋಗಿಸದೆ ಹಾಗೆ ಇಟ್ಟುಕೊಂಡಿದ್ದರೆ ಅದರ ಹಣವನ್ನು ಕೊಡುವುದಿಲ್ಲ, ಈ ಮೂಲಕ ಹಳೆಯ ನಿಯಮವನ್ನು ರದ್ದುಗೊಳಿಸಲಾಗಿದೆ.

ರಾಷ್ಟ್ರದಾದ್ಯಂತ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಕಂಡ ಕೆಲ ದಿನಗಳಲ್ಲೇ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಕಂಡ ಹಿನ್ನೆಲೆಯಲ್ಲಿ 2020ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಮಾಡಲು ಸರ್ಕಾರ ತೀರ್ಮಾನಿಸಿ ಆದೇಶಿಸಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.