Welcome To Kannada News Today

ಸಹಪಾಠಿಗಳು, ಶಿಕ್ಷಕರು, ಪ್ರಾಂಶುಪಾಲ ಸೇರಿ ತಿಂಗಳುಗಟ್ಟಲೆ ಅತ್ಯಾಚಾರ

Teen raped in school by students, teachers, principal

🌐 Kannada News :

ಕನ್ನಡ ನ್ಯೂಸ್ – Kannada News : National – ಸಹಪಾಠಿಗಳು, ಶಿಕ್ಷಕರು, ಪ್ರಾಂಶುಪಾಲ ಸೇರಿ ತಿಂಗಳುಗಟ್ಟಲೆ ಅತ್ಯಾಚಾರ .

ಬಿಹಾರದ ಚಾಪ್ರಾದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ. ಆರು ತಿಂಗಳು ನಿರಂತರ ಅತ್ಯಾಚಾರ ಮಾಡಿದ ಸಹಪಾಠಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರು. ಅತ್ಯಾಚಾರ ಎಸಗಿದ ಖಾಸಗಿ ಶಾಲೆಯ ಪ್ರಾಂಶುಪಾಲ ಮತ್ತು ಇಬ್ಬರು ವಿದ್ಯಾರ್ಥಿಗಳ ಬಂಧನ.

ರಾಷ್ಟ್ರೀಯ ಸುದ್ದಿ : ಬಿಹಾರದ ಚಾಪ್ರಾದಲ್ಲಿ 13 ವರ್ಷ ವಯಸ್ಸಿನ ಬಾಲಕಿ ಮೇಲೆ ಶಿಕ್ಷಕರು, ಪ್ರಾಂಶುಪಾಲರು ಸೇರಿದಂತೆ 15 ಜನ ಸಹಪಾಠಿಗಳು ನಿರಂತರ 6 ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 2017 ರಲ್ಲಿ ಮೊದಲು ಅತ್ಯಾಚಾರ ವೆಸಗಿದ ಸಹಪಾಠಿ ಅತ್ಯಾಚಾರ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.
ನಂತರ, ಇದೇ ಬ್ಲಾಕ್ ಮೇಲ್ ಗೆ ಒಳಗಾದ ಬಾಲಕಿ ಮೇಲೆ ಇತರ ವಿದ್ಯಾರ್ಥಿಗಳು ಕೂಡ ಅತ್ಯಾಚಾರ ಮಾಡಿದ್ದಾರೆ. ಆ ವಿಷಯವನ್ನು ಬಾಲಕಿ ಶಾಲಾ ಪ್ರಾಂಶುಪಾಲರಿಗೆ ವರದಿ ಮಾಡಿದಾಗ, ಅವನು ಮತ್ತು ಇತರ ಇಬ್ಬರು ಶಿಕ್ಷಕರು ಸಹ ಅತ್ಯಾಚಾರ ವೆಸಗಿದ್ದಾರೆ. ಪ್ರಕರಣ ಸಂಬಂಧ  ಪ್ರಾಂಶುಪಾಲ, ಶಿಕ್ಷಕರು ಸೇರಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ , ಹಾಗೂ ಬಾಲಕಿ ನೀಡಿರುವ ದೂರಿನಲ್ಲಿರುವ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯ ದೂರಿನಲ್ಲಿ ಒಟ್ಟು 18 ಮಂದಿಯ ಹೆಸರು ನಮೂದಾಗಿದೆ. //////

WebTitle : ಸಹಪಾಠಿಗಳು, ಶಿಕ್ಷಕರು, ಪ್ರಾಂಶುಪಾಲ ಸೇರಿ ತಿಂಗಳುಗಟ್ಟಲೆ ಅತ್ಯಾಚಾರ – Teen raped in school by students, teachers, principal

 

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.