ವಿವಾಹಿತೆಗೆ ಲೈನ್ ಹೊಡೀತಿದ್ದ ಯುವಕನಿಗೆ ಬಿತ್ತು ಸಕತ್ ಗೂಸಾ

The family of a married woman beats up man who harassed her - crime news

ಗೃಹಿಣಿ ಮನೆ ಮುಂದೆ ಕಾಮ ಚೇಷ್ಟೆ ಮಾಡುತ್ತಾ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಿಡಿದು ಥಳಿಸಿದ ಘಟನೆ ನಡೆದಿದೆ, ಸಧ್ಯ ಯುವಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ… ಘಟನೆಯ ವಿಡಿಯೋ ವೈರಲ್ ಆಗಿದೆ.

ಕನ್ನಡ ನ್ಯೂಸ್ ಟುಡೇ, ಆಂಧ್ರಪ್ರದೇಶ :

ವಿವಾಹಿತ ಮಹಿಳೆಗೆ ಅಶ್ಲೀಲ ಸನ್ನೆ ಮಾಡಿ, ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಯದ್ವಾತದ್ವ ಬಾರಿಸಿದ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಕೇಕ್ ನಂತೆ ವೈರಲ್ ಆಗಿದೆ.

ನಲ್ಲಗೊಂಡ ಉಪನಗರ ಅರ್ಜಲಾಬಾವಿ ಗ್ರಾಮದಲ್ಲಿ ಗುರುವಾರ ಈ ಘಟನೆ ಬೆಳಕಿಗೆ ಬಂದಿದೆ. ಆ ಗ್ರಾಮದ ಯುವಕ ಶ್ರೀಶೈಲಂ ಸೆಕೆಂಡ್ ಪಿಯುಸಿ ಮುಗಿಸಿದ್ದ, ಮಾಡೋಕೆ ಬೇರೆ ಕ್ಯಾಮೆ ಇಲ್ಲದೆ, ದೇವರಿಗೆ ಬಿಟ್ಟ ಗೂಳಿ ತರ ಊರೆಲ್ಲಾ ಸುತ್ತಾಡ್ತಾಯಿದ್ದ. ಈ ನಡುವೆ ಅದೇ ಗ್ರಾಮದ ವಿವಾಹಿತೆ ಮಹಿಳೆ ಮನೆ ಮುಂದೆ ಪ್ರತಿನಿತ್ಯ ಬೀಟ್ ಹೊಡೆದು ಅಶ್ಲೀಲ ಸನ್ನೆ ಮಾಡ್ತಾಯಿದ್ದ.

ಪ್ರತಿನಿತ್ಯ ಹೊಟ್ಟೆ ತುಂಬಾ ಉಣ್ಣೋದು, ಆಫೀಸರ್ ತರ ರೆಡಿಯಾಗಿ ಬೈಕ್ ಏರಿ ಮಹಿಳೆ ಮನೆ ಮುಂದೆ ಅತ್ತಿಂದ್ದಿತ್ತ ಬೀಟ್ ಹೊಡೆಯೋದು, ಇದೆ ಇವನ ಕಾಯಕ ಆಗೋಗಿತ್ತು….

ದಿನೇ ದಿನೇ ಇವನ ಕಾಟ ತಡೀಲಾರದೆ, ಆಕೆ ಈ ರೋಡ್ ರೋಮಿಯೋ ಬಗ್ಗೆ ತನ್ನ ಗಂಡನಿಗೆ ಹೇಳಿದ್ದಾಳೆ. ಆಕೆಯ ಗಂಡ ಮನೆಯ ಮುಂದೆ ಸಿಸಿಟಿವಿ ಅಳವಡಿಸಿ, ಅವನ ಎಲ್ಲಾ ಕಾಮ ಚೇಷ್ಟೆಗಳನ್ನ ನೋಡಿ, ಈ ಬಾರಿ ಬಂದ ಅವನನ್ನ ಹಿಡಿದು ಮರಕ್ಕೆ ಕಟ್ಟಿಹಾಕಿದ್ದಾನೆ.

ಅಷ್ಟೇ ಅಲ್ಲ, ಇಷ್ಟು ದಿವಸ ಆತ ಬೀಟ್ ಹೊಡಿತ್ತಿದ್ದ ಆಕೆಯನ್ನೇ ಕರೆದು ಚಪ್ಪಲಿ ಕಾಲಲ್ಲಿ ಒದ್ದಿ ಬುದ್ದಿ ಹೇಳಿಸಿದ್ದಾರೆ. ಯದ್ವಾತದ್ವ ಬಾರಿಸಿ, ಸ್ವಾಮೀ ಬಿಟ್ ಬಿಡ್ರಪ್ಪೋ…. ಅನ್ನೋ ತನಕ ಬಾರಿಸಿ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಧ್ಯ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.////


Web Title : The family of a married woman beats up man who harassed her
(Kannada News : Get Live News Alerts Online Today @ kannadanews.today – Read Latest India News / National News Headlines, Breaking News in Kannada )