ಲಿಫ್ಟ್ ಕುಸಿದು ಒಂದೇ ಕುಟುಂಬದ 6 ಜನರ ದುರ್ಮರಣ

The lift collapsed, killing 6 people in the same family

ಇಂದೋರ್ : ಮಧ್ಯಪ್ರದೇಶದ ಇಂದೋರ್‌ನ ಪಾಟಲ್‌ಪಾನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ತಾತ್ಕಾಲಿಕವಾಗಿ ಇರಿಸಲಾಗಿದ್ದ ಲಿಫ್ಟ್ ಕುಸಿದಿದೆ. ಏಕಾಏಕಿ ಕುಸಿದ ಲಿಫ್ಟ್ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮರಣ ಹೊಂದಿರುವ ಎಲ್ಲರು ಒಂದೇ ಕುಟುಂಬವರೆಂದು ತಿಳಿದುಬಂದಿದೆ.

ಅಪಘಾತದಲ್ಲಿ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ದುರ್ಘಟನೆ ಸ್ಥಳೀಯವಾಗಿ ಕೋಲಾಹಲಕ್ಕೆ ಕಾರಣವಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದೋರ್‌ನಿಂದ ದಕ್ಷಿಣಕ್ಕೆ 25 ಕಿ.ಮೀ ದೂರದಲ್ಲಿರುವ ಮಾಹು ಎಂಬಲ್ಲಿನ ತೋಟದ ಮನೆಯೊಂದರಲ್ಲಿ ಲಿಫ್ಟ್ ಕುಸಿದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪುನೀತ್ ಅಗರ್ವಾಲ್ (53), ಅವರ ಮಗಳು ಪಾಲಕ್ (27), ಮತ್ತು ದಮದ್ ಕಲ್ಪೇಶ್ (28) ಮತ್ತು ಅದೇ ಕುಟುಂಬದ ಇತರ ಮೂವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅದೇ ಕುಟುಂಬಕ್ಕೆ ಸೇರಿದ ನಿಧಿ ಅಗರ್ವಾಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಧ್ಯ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ದಾಖಲಿಸಿರುವ ಪೊಲೀಸರು, ಘಟನೆಯ ಬಹ್ಹೆ ತನಿಖೆ ನಡೆಸುತ್ತಿದ್ದಾರೆ.

Get Latest Kannada News for national news headlines and breaking India news, Top News in Kannada