Kannada News - Kannadigas Adda

Welcome To Kannada News - Kannadigas Adda

TikTok, ಟಿಕ್ ಟಾಕ್ ಗೆ ಬಂತು ಕಂಟಕ, ಬ್ಯಾನ್ ಮಾಡಲು ಹೈಕೋರ್ಟ್ ಆದೇಶ

The Madras High Court has ordered the central government to ban the TikTok app

Kannadanews.today - ಕನ್ನಡಿಗಾಸ್ ಅಡ್ಡ

TikTok, ಟಿಕ್ ಟಾಕ್ ಗೆ ಬಂತು ಕಂಟಕ, ಬ್ಯಾನ್ ಮಾಡಲು ಹೈಕೋರ್ಟ್ ಆದೇಶ

ಟಿಕ್ ಟಾಕ್ ಪ್ರಿಯರಿಗೊಂದು ಕೆಟ್ಟ ಸುದ್ದಿ, ಆದರೂ ಇದೊಂದು ಉತ್ತಮ ಬೆಳವಣಿಗೆ, ಟಿಕ್ ಟೋಕ್ ಅಪ್ಲಿಕೇಶನ್ ಅನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಅಶ್ಲೀಲ ವಿಷಯವನ್ನು ಹರಡುತ್ತಿರುವ ಕಾರಣದಿಂದಾಗಿ TikTok App ಡೌನ್ಲೋಡ್ ಮಾಡುವುದು ಮತ್ತು ಉಪಯೋಗಿಸುವುದನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ನಿರ್ದೇಶಿಸಿದೆ.

ಚೈನಿಸ್ App tiktok ನಿಷೇದಕ್ಕೆ ಆದೇಶ

ಚೈನಿಸ್ ಅಪ್ಲಿಕೇಶನ್ ಟಿಕ್ ಟಾಕ್ ಅನ್ನು ಈಗಾಗಲೇ ಹಲವರು ವಿರೋಧಿಸಿದ್ದರು, ಇದೀಗ ಅದರ ಮೇಲೆ ಅಶ್ಲೀಲತೆಯನ್ನು ಹರಡುವ ಆರೋಪ ಮೇಲೆ ಮದ್ರಾಸ್ ಹೈಕೋರ್ಟ್ ಅದನ್ನು ನಿಷೇಧಿಸುವಂತೆ ಆದೇಶಿಸಿದೆ. ಇದಲ್ಲದೆ, ಈ ಅಪ್ಲಿಕೇಶನ್ನಿಂದ ಮಾಡಿದ ವೀಡಿಯೊಗಳನ್ನು ಎಲ್ಲಿಯೂ ಪ್ರಸಾರ ಮಾಡಬಾರದು, ಹಂಚಿಕೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

TikTok, ಟಿಕ್ ಟಾಕ್ ಗೆ ಬಂತು ಕಂಟಕ, ಬ್ಯಾನ್ ಮಾಡಲು ಹೈಕೋರ್ಟ್ ಆದೇಶ
ಟಿಕ್ ಟಾಕ್

ಆಶ್ಚರ್ಯವೇನೆಂದರೆ ಪ್ರತಿ ತಿಂಗಳು ಭಾರತದಲ್ಲಿ 54 ಮಿಲಿಯನ್ ಸಕ್ರಿಯ ಬಳಕೆದಾರರನ್ನು TikTok App ಹೊಂದಿದೆ. ಮಿಲಿಯನ್ ಗಟ್ಟಲೆ ಬಳಕೆದಾರರು ಈ ಆಪ್ ಅನ್ನು ಬಳಸುತ್ತಿದ್ದಾರೆ.

ಕಾಮಪ್ರಚೋದಕ TikTok App

TikTok App ವಿರುದ್ಧ ಮಧುರೈನ ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಮಿಕು ಕುಮಾರ್ ನಿಷೇಧವನ್ನು ಕೋರಿ ಮನವಿ ಸಲ್ಲಿಸಿದ್ದರು, ಅಶ್ಲೀಲ ವಿಷಯಗಳನ್ನು ಹರಡುತ್ತಿದೆ, ಮಕ್ಕಳ ಬಳಕೆಯಿಂದಾಗಿ, ಆತ್ಮಹತ್ಯೆಗಳು, ಕಾಮಪ್ರಚೋದನೆಗಳು ಸಹ ನಡೆಯುತ್ತವೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಇನ್ನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಪ್ಲಿಕೇಶನ್ ಅನ್ನು ಬಳಸುವ ಮಕ್ಕಳು ಅಶ್ಲೀಲ ವಿಷಯದಿಂದ ಪ್ರಭಾವ ಗೊಳ್ಳುತ್ತಾರೆ ಎಂದು ನಾಯಮೂರ್ತಿಗಳಾದ  ಎನ್. ಕಿರುಬಕರನ್ ಮತ್ತು ಎಸ್.ಎಸ್. ಸುಂದರಿ ಈ ನಿಷೇಧವನ್ನು ಜಾರಿಗೊಳಿಸಬೇಕೆಂದು ಆದೇಶ ನೀಡಿದರು ಮತ್ತು 16 ನೇ ದಿನಾಂಕದ ಮೊದಲು ಉತ್ತರಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿದೆ..

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.