ಡಿ.31 ರವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ಇಲ್ಲ

ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಭಾರತ ಅಂತರಾಷ್ಟ್ರೀಯ ಸೇವೆಯ ನಿರ್ಬಂಧವನ್ನು ಡಿ.31 ವರೆಗೆ ವಿಸ್ತರಿಸಿದೆ.

( Kannada News Today ) : ನವದೆಹಲಿ : ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಭಾರತ ಅಂತರಾಷ್ಟ್ರೀಯ ಸೇವೆಯ ನಿರ್ಬಂಧವನ್ನು ಡಿ.31 ವರೆಗೆ ವಿಸ್ತರಿಸಿದೆ.

ಅಂತರಾಷ್ಟ್ರೀಯ ಸರಕು ಸಾಗಣೆ ಹೊರತುಪಡಿಸಿ ಡಿ.31 ರವರೆಗೂ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಸೇವೆಯನ್ನು ನಾಗರೀಕ ವಿಮಾನಯಾನ ನಿರ್ದೇಶನಾಲಯ ನಿರ್ಬಂಧಿಸಿದೆ.

ಕೊರೊನಾ ಸೋಂಕಿನ ಹಿನ್ನೆಲೆ ಮಾರ್ಚ್ 21 ರಿಂದ ಭಾರತದಲ್ಲಿ ನಿಗದಿತ ಅಂತರಾಷ್ಟ್ರೀಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು, ಆದರೆ ವಿಶೇಷ ಅಂತರಾಷ್ಟ್ರಿಯ ವಿಮಾನಗಳು ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಯಿತು.

Scroll Down To More News Today