ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ, ಮೂವರು ಚಾರಣಿಗರು ಸಾವು

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವು ಮೂವರು ಚಾರಣಿಗರನ್ನು ಬಲಿ ತೆಗೆದುಕೊಂಡಿದೆ. 13 ಜನರ ಗುಂಪು ರೋಹ್ರು, ಶಿಮ್ಲಾದ ಜಂಗ್ಲೇಖ್ ನಿಂದ ಸಾಂಗ್ಲಾ ಮತ್ತು ಕಿನ್ನೌರ್ ಗೆ ಚಾರಣಕ್ಕೆ ಹೊರಟಿದ್ದರು.

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವು ಮೂವರು ಚಾರಣಿಗರನ್ನು ಬಲಿ ತೆಗೆದುಕೊಂಡಿದೆ. 13 ಜನರ ಗುಂಪು ರೋಹ್ರು, ಶಿಮ್ಲಾದ ಜಂಗ್ಲೇಖ್ ನಿಂದ ಸಾಂಗ್ಲಾ ಮತ್ತು ಕಿನ್ನೌರ್ ಗೆ ಚಾರಣಕ್ಕೆ ಹೊರಟಿದ್ದರು.

ಭಾರೀ ಹಿಮ ಬೀಳುತ್ತಿದ್ದರಿಂದ ಚಾರಣಿಗರು ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಕಿನ್ನೌರ್ ಡೆಪ್ಯುಟಿ ಕಮಿಷನರ್ ಅಪೂರ್ವ್ ದೇವಗನ್, ಮೂವರು ಚಾರಣಿಗರು ಭಾರೀ ಹಿಮಪಾತದಿಂದ ಸಾವನ್ನಪ್ಪಿದ್ದಾರೆ ಮತ್ತು ಅವರ ದೇಹಗಳು ನಾಲ್ಕು ಅಡಿ ಹಿಮದ ಅಡಿಯಲ್ಲಿ ಹೂತುಹೋಗಿವೆ ಎಂದು ಹೇಳಿದರು.

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಹಿಮದಲ್ಲಿ ಸಿಲುಕಿಕೊಂಡಿದ್ದ 10 ಚಾರಣಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುರಕ್ಷಿತವಾಗಿ ಪಾರಾದವರಲ್ಲಿ ಒಂಬತ್ತು ಮಂದಿ ಮುಂಬೈನವರು ಮತ್ತು ಒಬ್ಬರು ಹೊಸದಿಲ್ಲಿಯವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ, ಉತ್ತರಕಾಶಿಯ ಹರ್ಸಿಲ್‌ನಿಂದ ಕಿನ್ನೌರ್‌ಗೆ ತೆರಳುತ್ತಿದ್ದ ಇಬ್ಬರು ಪಾದಯಾತ್ರಿಕರು ಲಂಕಾ ಮತ್ತು ಕಿನ್ನೌರ್‌ನಿಂದ ಕಾಣೆಯಾಗಿದ್ದಾರೆ. ಉತ್ತರಾಖಂಡ ರಾಜ್ಯದಲ್ಲಿ ಭಾರೀ ಹಿಮಪಾತದಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ ನಾಪತ್ತೆಯಾಗಿರುವ ಚಾರಣಿಗರ ಹುಡುಕಾಟಕ್ಕೆ ಸೋಮವಾರದಿಂದ ಕಾರ್ಯಾಚರಣೆ ಆರಂಭವಾಗಿದೆ.

Stay updated with us for all News in Kannada at Facebook | Twitter
Scroll Down To More News Today