ಮಧ್ಯಪ್ರದೇಶ ಎನ್ಕೌಂಟರ್ನಲ್ಲಿ ಮೂವರು ಮಾವೋವಾದಿಗಳ ಹತ್ಯೆ
ಬಾಲಾಘಾಟ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಮಹಿಳಾ ಮಾವೋವಾದಿ ಸೇರಿದಂತೆ ಮೂವರು ಮಾವೋವಾದಿಗಳ ಹತ್ಯೆ
ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಲಾಂಜಿ ಪ್ರಧಾನ ಕಛೇರಿಯಿಂದ 15 ಕಿಮೀ ದೂರದಲ್ಲಿರುವ ಬಹೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕಡ್ಲಾ ಗ್ರಾಮದಲ್ಲಿ ಎನ್ಕೌಂಟರ್ ನಡೆದಿದೆ.
ಮೃತರನ್ನು ನಾಗೇಶ್, ಮನೋಜ್ ಮತ್ತು ರಾಮೇಗ ಎಂದು ಗುರುತಿಸಲಾಗಿದೆ. ನಾಗೇಶ್ ವಿಭಾಗೀಯ ಸಮಿತಿಯ ಸದಸ್ಯರಾಗಿದ್ದರು, ಮನೋಜ್ ಅವರು ಪ್ರದೇಶ ಸಮಿತಿಯ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎನ್ಕೌಂಟರ್ ಅನ್ನು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಖಚಿತಪಡಿಸಿದ್ದಾರೆ.
ನಾಗೇಶ್ಗೆ 15 ಲಕ್ಷ ರೂಪಾಯಿ, ಮನೋಜ್ಗೆ 8 ಲಕ್ಷ ರೂಪಾಯಿ ಬಹುಮಾನವಿದೆ. ಘಟನಾ ಸ್ಥಳದಿಂದ ಎಕೆ-47 ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಮಾವೋವಾದಿಗಳ ಚಲನವಲನದ ಬಗ್ಗೆ ತಮ್ಮ ಬಳಿ ನಿರ್ದಿಷ್ಟ ಮಾಹಿತಿ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಶರಣಾಗತಿಗೆ ತಾಯಾರಿರಲಿಲ್ಲ, ಮತ್ತು ಪೊಲೀಸರು ಗುಂಪಿನ ಮೇಲೆ ಗುಂಡು ಹಾರಿಸಿದರು ಎಂದು ತಿಳಿದುಬಂದಿದೆ.
Three Maoists Killed In Encounter In Balaghat
Follow Us on : Google News | Facebook | Twitter | YouTube