ಪತಿಯ ಎದುರೇ ಪತ್ನಿಯ ಅತ್ಯಾಚಾರ
Three men have been arrested for allegedly raping a woman in front of her husband
ಪತಿಯ ಎದುರೇ ಪತ್ನಿಯ ಅತ್ಯಾಚಾರ – Three men have been arrested for allegedly raping a woman in front of her husband
ಪತಿಯ ಎದುರೇ ಪತ್ನಿಯ ಅತ್ಯಾಚಾರ
ಕನ್ನಡ ನ್ಯೂಸ್ ಟುಡೇ – ಅಸ್ಸಾಂನ ದಿಬ್ರುಗರ್ ಜಿಲ್ಲೆಯಲ್ಲಿ ತನ್ನ ಗಂಡನ ಎದುರೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು, ತ್ರಿಶಿತ್ ಶರ್ಮಾ, ವಿವೇಕ್ ಕುನ್ವಾರ್ ಮತ್ತು ಭಾಸ್ಕರ್ ಬೊರ್ಗೊಹೈ ಎಂದು ಗುರುತಿಸಲಾಗಿದೆ, ಆರೋಪಿಗಳು ಸಂತ್ರಸ್ತೆಯ ಮನೆಗೆ ನೀರು ಕೇಳುವ ನೆಪದಲ್ಲಿ ಬಂದಿದ್ದಾರೆ. ಆಕೆಯ ಪತಿ ನೀರು ತರಲು ಅಡುಗೆ ಮನೆಗೆ ಹೋದ ಕೂಡಲೇ, ಆರೋಪಿಗಳು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆಂದು ತಿಳಿದುಬಂದಿದೆ. ಸರಿಸಮಾರು ಮುಂಜಾನೆ 1.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಸಂತ್ರಸ್ತೆಯ ದೂರು ಧಾಖಲಿಸಿದ ಪೊಲೀಸರು ಮೂವರು ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಮೂಲಗಳು, “ಮೂವರು ಆಕೆಯ ಮನೆಗೆ ಹೋಗಿ ನೀರು ಕೇಳಿದ್ದಾರೆ, ನಂತರ, ಬಲವಂತವಾಗಿ ಒಳಗೆ ಪ್ರವೇಶಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಸಧ್ಯ ಎಲ್ಲಾ ಮೂವರನ್ನು ಬಂಧಿಸಲಾಗಿದೆ, ”ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಧ್ರುವ ಬೋರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.////
Web Title : Three men have been arrested for allegedly raping a woman in front of her husband