ಯುಪಿ ವಿಧಾನಸಭೆ ಚುನಾವಣೆಗೆ ತೃಣಮೂಲ ಸಜ್ಜು

ಯುಪಿ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಎಂಟ್ರಿ ಕೊಡಲು ಸಜ್ಜಾಗಿದೆ. ಇದರ ಭಾಗವಾಗಿ ಯುಪಿ ಕಾಂಗ್ರೆಸ್ ಎಂಎಲ್ ಸಿ ರಾಜೇಶ್ ಪತಿ ತ್ರಿಪಾಠಿ ಮತ್ತು ಅವರ ಪುತ್ರ ಲಲಿತೇಶಪತಿ ತ್ರಿಪಾಠಿ ಅವರನ್ನು ಆಹ್ವಾನಿಸಲಾಗಿತ್ತು.

ಲಕ್ನೋ: ಯುಪಿ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಎಂಟ್ರಿ ಕೊಡಲು ಸಜ್ಜಾಗಿದೆ. ಇದರ ಭಾಗವಾಗಿ ಯುಪಿ ಕಾಂಗ್ರೆಸ್ ಎಂಎಲ್ ಸಿ ರಾಜೇಶ್ ಪತಿ ತ್ರಿಪಾಠಿ ಮತ್ತು ಅವರ ಪುತ್ರ ಲಲಿತೇಶಪತಿ ತ್ರಿಪಾಠಿ ಅವರನ್ನು ಆಹ್ವಾನಿಸಲಾಗಿತ್ತು.

ಸೋಮವಾರ ತೃಣಮೂಲ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಇಬ್ಬರೂ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜೇಶಪತಿ ಯುಪಿ ಮಾಜಿ ಸಿಎಂ ಕಮಲಾಪತಿ ತ್ರಿಪಾಠಿ ಅವರ ಮೊಮ್ಮಗ.

ತ್ರಿಪಾಠಿ ಕುಟುಂಬವು ಬ್ರಾಹ್ಮಣ ಸಮುದಾಯದ ಮೇಲೆ ಬಲವಾದ ಹಿಡಿತವನ್ನು ಹೊಂದಿದೆ, ವಿಶೇಷವಾಗಿ ಪೂರ್ವಾಂಚಲ್ ಪ್ರದೇಶದಲ್ಲಿ. ಗಾಂಧಿ ಕುಟುಂಬಕ್ಕೆ ಆಪ್ತರು ಎನ್ನಲಾದ ತ್ರಿಪಾಠಿ ಕುಟುಂಬ ಕಳೆದ ತಿಂಗಳು ಕಾಂಗ್ರೆಸ್ ತೊರೆದಿತ್ತು. ಶೀಘ್ರದಲ್ಲೇ ವಾರಣಾಸಿಯಲ್ಲಿ ಮಮತಾ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Stay updated with us for all News in Kannada at Facebook | Twitter
Scroll Down To More News Today