Weather Today: ದೆಹಲಿಯಲ್ಲಿ ಅಕಾಲಿಕ ಮಳೆ, ಕೇರಳದಲ್ಲಿ ಪ್ರವಾಹ, ಉತ್ತರಾಖಂಡದಲ್ಲಿ ಮುಂದಿನ ಎರಡು ದಿನಗಳವರೆಗೆ ಎಚ್ಚರಿಕೆ

Weather Forecast Today: ಭೂಕುಸಿತ ಮತ್ತು ಮಳೆಯೊಂದಿಗೆ ದಿಡೀರ್ ಪ್ರವಾಹದಿಂದಾಗಿ, ಕೇರಳದಲ್ಲಿ ಸಾಕಷ್ಟು ವಿನಾಶ ಸಂಭವಿಸಿದೆ. ದಕ್ಷಿಣ ರಾಜ್ಯಗಳಾದ ಕೇರಳ, ಒಡಿಶಾ ಸೇರಿದಂತೆ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Today Weather Updates: ಕೇರಳದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಜನರನ್ನು ತಲ್ಲಣಗೊಳಿಸಿದೆ. ಮಳೆಯೊಂದಿಗೆ ಭೂಕುಸಿತಗಳು ಮತ್ತು ದಿಡೀರ್ ಪ್ರವಾಹಗಳು ಕೇರಳದಲ್ಲಿ ಭಾರೀ ವಿನಾಶವನ್ನು ಉಂಟುಮಾಡಿದೆ. ಅದೇ ಸಮಯದಲ್ಲಿ, ಉತ್ತರಾಖಂಡದಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ರೆಡ್ ಅಲರ್ಟ್ ಇದೆ. ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂದಿನ ಎರಡು ದಿನಗಳವರೆಗೆ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಹತ್ರಾಸ್, ಅಲಿಗಡ, ಆಗ್ರಾ, ದೇವಬಂದ್, ನಜಿಬಾಬಾದ್, ಮುzಫರ್ನಗರ, ಬಿಜ್ನೋರ್, ಹಸ್ತಿನಾಪುರ, ಚಾಂದಪುರ, ಮೀರತ್, ಹಾಪುರ್, ಕಿಥೋರ್, ಮೊರಾದಾಬಾದ್, ಅಮ್ರೋಹಾ ಮತ್ತು ಯುಪಿಯ ಪಕ್ಕದ ಪ್ರದೇಶಗಳಲ್ಲಿ ಅಕ್ಟೋಬರ್ 18 ರಂದು ಮಳೆಯಾಗಲಿದೆ .

ಹರಿಯಾಣದ ಪಲ್ವಾಲ್, ಔರಂಗಾಬಾದ್, ಫರಿದಾಬಾದ್, ಬಲ್ಲಬ್‌ಗಡ ಮತ್ತು ತುಂಡ್ಲಾ, ಭರತ್‌ಪುರ, ನಗರ ಮತ್ತು ರಾಜಸ್ಥಾನದ ಪಕ್ಕದ ಪ್ರದೇಶಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಈವರೆಗೆ ಕೊಟ್ಟಾಯಂ ಒಂದರಲ್ಲೇ 13 ಜನರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಮಳೆ-ಭೂಕುಸಿತದಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. NDRF ತಂಡಗಳು ಪರಿಹಾರ ಮತ್ತು ರಕ್ಷಣೆಯಲ್ಲಿ ತೊಡಗಿಕೊಂಡಿವೆ. ಪರಿಹಾರ ಕಾರ್ಯದಲ್ಲಿ ಮೂರು ಸೇನೆಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ಏತನ್ಮಧ್ಯೆ, ಹವಾಮಾನ ಇಲಾಖೆ (ಐಎಂಡಿ) ಕೇರಳದ 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ವಿಶೇಷವಾಗಿ ಕೊಟ್ಟಾಯಂ, ಇಡುಕ್ಕಿ, ಎರ್ನಾಕುಮಾಲ್, ಪತ್ತನಂತಿಟ್ಟ ಮತ್ತು ತ್ರಿಶೂರ್‌ಗೆ ಮಳೆಯ ಎಚ್ಚರಿಕೆಯಿದೆ.

ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜನರು ಮನೆಯಿಂದ ಹೊರಗೆ ಬರಬೇಡಿ ಮತ್ತು ಜಾಗರೂಕರಾಗಿರಿ ಎಂದು ಮನವಿ ಮಾಡಲಾಗಿದೆ.

ಉತ್ತರಾಖಂಡದಲ್ಲಿ ಮಳೆ ಎಚ್ಚರಿಕೆ

ಹವಾಮಾನ ಇಲಾಖೆ (ಐಎಂಡಿ) ಉತ್ತರ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಉತ್ತರಾಖಂಡದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯಿದೆ. ಚಾರ್ ಧಾಮ್ ಯಾತ್ರೆಯನ್ನು ನಿಲ್ಲಿಸಲಾಗಿದೆ. ಉತ್ತರಾಖಂಡದಲ್ಲಿ ಭೂ ಕುಸಿತ ಮತ್ತು ನದಿಗಳ ಪ್ರವಾಹದ ಅಪಾಯ ಹೆಚ್ಚಾಗಿದೆ. ಭಾರೀ ಮಳೆಯ ಎಚ್ಚರಿಕೆಯ ಕಾರಣ, ಬದರಿನಾಥ ಧಾಮಕ್ಕೆ ಹೋಗುವ ಎಲ್ಲಾ ಯಾತ್ರಾರ್ಥಿಗಳನ್ನು ನಿಲ್ಲಿಸಲಾಗುತ್ತಿದೆ. ಸರ್ಕಾರವು ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳಿಗೆ ಎಚ್ಚರಿಕೆಯನ್ನು ನೀಡುವಂತೆ ಸೂಚಿಸಿದೆ.

Stay updated with us for all News in Kannada at Facebook | Twitter
Scroll Down To More News Today