ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸಹಸ್ರಾರು ರೈತರಿಂದ ಬೃಹತ್ ಟ್ರಾಕ್ಟರ್ ಮೆರವಣಿಗೆ

ಕೇಂದ್ರ ಸರ್ಕಾರ ಪರಿಚಯಿಸಿದ ಹೊಸ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಗುರುವಾರ ದೇಶದ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಘಾಜಿಪುರದ ಗಡಿ ಪ್ರದೇಶದಿಂದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಪ್ರಾರಂಭಿಸಿದರು.

ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸಹಸ್ರಾರು ರೈತರಿಂದ ಬೃಹತ್ ಟ್ರಾಕ್ಟರ್ ಮೆರವಣಿಗೆ

(Kannada News) : ನವದೆಹಲಿ: ಕೇಂದ್ರ ಸರ್ಕಾರ ಪರಿಚಯಿಸಿದ ಹೊಸ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಗುರುವಾರ ದೇಶದ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಘಾಜಿಪುರದ ಗಡಿ ಪ್ರದೇಶದಿಂದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಪ್ರಾರಂಭಿಸಿದರು.

ಮೆರವಣಿಗೆಯಲ್ಲಿ ಸುಮಾರು 3500 ಟ್ರಾಕ್ಟರುಗಳು ಮತ್ತು ಟ್ರಾಲಿಗಳು ಭಾಗವಹಿಸುತ್ತಿವೆ ಎಂದು ಭಾರತಿ ಕಿಸಾನ್ ಯೂನಿಯನ್ ಮುಖಂಡ ಜೋಗಿಂದರ್ ಸಿಂಗ್ ಉಗ್ರಹಾನ್ ಹೇಳಿದ್ದಾರೆ.

ರೈತರಿಂದ ಬೃಹತ್ ಟ್ರಾಕ್ಟರ್ ಮೆರವಣಿಗೆ
ರೈತರಿಂದ ಬೃಹತ್ ಟ್ರಾಕ್ಟರ್ ಮೆರವಣಿಗೆ

ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಜನವರಿ 26 ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ ಎಂದು ಪ್ರತಿಭಟನಾ ರೈತ ಸಂಘಗಳು ಹೇಳಿವೆ. ಅದಕ್ಕಾಗಿ ಇದು ಪೂರ್ವಭಾವಿ ತಾಲೀಮು ಎಂದು ಪ್ರತಿಭಟನಾನಿರತ ರೈತ ಯೂನಿಯನ್ ಗಳು ತಳಿಸಿವೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಟ್ರಾಕ್ಟರ್ ಮೆರವಣಿಗೆ
ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಟ್ರಾಕ್ಟರ್ ಮೆರವಣಿಗೆ

ಟ್ರ್ಯಾಕ್ಟರ್ ಮೆರವಣಿಗೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ಕುಂಡ್ಲಿ, ಮನೇಸರ್, ಪಾಲ್ವಾಲಾ ಎಕ್ಸ್‌ಪ್ರೆಸ್ ಕಡೆಗೆ ಹೊರಟಿತು ಮತ್ತು ಅವರಿಗೆ ದೆಹಲಿ ಮತ್ತು ಹರಿಯಾಣ ಪೊಲೀಸರು ಕಠಿಣ ಭದ್ರತೆ ನೀಡಿದರು.

Web Title : Tractor rally in Delhi By Farmers

Scroll Down To More News Today