Welcome To Kannada News Today

7 ಹೈಕೋರ್ಟ್​ ನ್ಯಾಯಾಧೀಶರ ವರ್ಗಾವಣೆ ಮಾಡಿದ ಕೇಂದ್ರ ಸರ್ಕಾರ

ಕರ್ನಾಟಕದ ಓರ್ವ ನ್ಯಾಯಾಧೀಶರು ಸೇರಿದಂತೆ 7 ಹೈಕೋರ್ಟ್​ ನ್ಯಾಯಾಧೀಶರುಗಳ ವರ್ಗಾವಣೆ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್​ ರಿಜಿಜು ಟ್ವೀಟ್​ ಮಾಡಿದ್ದಾರೆ.

🌐 Kannada News :

ಕರ್ನಾಟಕದ ಓರ್ವ ನ್ಯಾಯಾಧೀಶರು ಸೇರಿದಂತೆ 7 ಹೈಕೋರ್ಟ್​ ನ್ಯಾಯಾಧೀಶರುಗಳ ವರ್ಗಾವಣೆ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್​ ರಿಜಿಜು ಟ್ವೀಟ್​ ಮಾಡಿದ್ದಾರೆ.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಸಮಾಲೋಚನೆ ನಡೆಸಿ, ಹೈಕೋರ್ಟ್​ ನ್ಯಾಯಾಧೀಶರ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ವರ್ಗಾವಣೆಯಾದ ನ್ಯಾಯಾಧೀಶರ ವಿವರ :

1. ನ್ಯಾಯಾಧೀಶ ರಂಜನ್​ ಗುಪ್ತಾ : ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​​ನಿಂದ ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ.
2. ನ್ಯಾ.ಟಿ.ಎಸ್​. ಶಿವಜ್ಞಾನಂ: ಮದ್ರಾಸ್​ ಹೈಕೋರ್ಟ್​ನಿಂದ ಕೋಲ್ಕತ್ತ ಹೈಕೋರ್ಟ್​ಗೆ ವರ್ಗ.
3. ನ್ಯಾ.ಸುರೇಶ್ವರ್ ಠಾಕೂರ್​: ಹಿಮಾಚಲ ಪ್ರದೇಶದಿಂದ ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​ಗೆ ವರ್ಗಾವಣೆ
4. ಪಿ.ಬಿ.ಭಜಂತ್ರಿ-ಕರ್ನಾಟಕ ಹೈಕೋರ್ಟ್​​ನಿಂದ ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ
5. ಸಂಜೀವ್​ ಪ್ರಕಾಶ ಶರ್ಮ- ರಾಜಸ್ಥಾನ ಹೈಕೋರ್ಟ್​ನಿಂದ ಪಟ್ನಾ ಹೈಕೋರ್ಟ್​ಗೆ ವರ್ಗ.
6. ಟಿ.ಅಮರನಾಥ್​ ಗೌಡ: ತೆಲಂಗಾಣ ಹೈಕೋರ್ಟ್​​ನಿಂದ ತ್ರಿಪುರಕ್ಕೆ ವರ್ಗಾವಣೆ
7. ಸುಭಾಷ್​ ಚಂದ್​: ಅಲಹಬಾದ್​ ಹೈಕೋರ್ಟ್​ನಿಂದ ಜಾರ್ಖಂಡ ಹೈಕೋರ್ಟ್​ಗೆ ಟ್ರಾನ್ಸ್​ಫರ್​

📣 ಇನ್ನಷ್ಟು ಕನ್ನಡ ಇಂಡಿಯಾ ನ್ಯೂಸ್ ಗಳಿಗಾಗಿ India News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today